ಜಪಾನಿನ ಕಾಮಕುರಾ ನಗರದಲ್ಲಿದೆ 600 ವರ್ಷಗಳಷ್ಟು ಹಳೆಯದಾದ ವಿಚ್ಛೇದನ ದೇವಾಲಯವಿದೆ. ಮತ್ಸುಗೋಕಾ ಟೋಕಿಜಿ ದೇವಾಲಯವು ಬೌದ್ಧ ದೇವಾಲಯವಾಗಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತಮ್ಮ ಗಂಡನಿಂದ ವಿಚ್ಛೇದನ ಪಡೆಯಲು ಕಾನೂನುಬದ್ಧ ಹಕ್ಕನ್ನು ಹೊಂದಿರದ ಸಮಯಕ್ಕೂ ಹಿಂದಿನದು ಈ ದೇವಾಲಯ.
ಜಪಾನಿಗೆ ವಿಚ್ಛೇದನದ ಪರಿಕಲ್ಪನೆಯ ಪರಿಚಯವಿಲ್ಲದ ಕಾಲವೂ ಅದು. ಇದು ತಮ್ಮ ಗಂಡನ ಕೈಯಲ್ಲಿ ಕೌಟುಂಬಿಕ ಹಿಂಸೆಯಿಂದ ಬಳಲುತ್ತಿರುವ ಹಲವಾರು ಮಹಿಳೆಯರಿಗೆ ನೆಲೆಯಾಗಿದೆ. ಇದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
1285 ರಲ್ಲಿ, ಬೌದ್ಧ ಸನ್ಯಾಸಿನಿ ಕಾಕುಸನ್ ಶಿದ್-ನಿ ಕಾಮಕುರಾ ನಗರದಲ್ಲಿ ಮತ್ಸುಗಾವೊಕಾ ಟೋಕಿಜಿ ದೇವಾಲಯವನ್ನು ನಿರ್ಮಿಸಿದರು. ಆ ಸಮಯದಲ್ಲಿ 1185 ಮತ್ತು 1333 ರ ನಡುವೆ, ಜಪಾನ್‌ನಲ್ಲಿ ಮಹಿಳೆಯರು ಕಾನೂನು ಹಕ್ಕುಗಳನ್ನು ಪಡೆಯಲು ಸೀಮಿತ ಅವಕಾಶದೊಂದಿಗೆ ಹಲವಾರು ಸಾಮಾಜಿಕ ನಿರ್ಬಂಧಗಳನ್ನು ಹೊಂದಿದ್ದರು. ಅತೃಪ್ತ ವಿವಾಹಗಳನ್ನು ಹೊಂದಿರುವ ಮಹಿಳೆಯರು, ಕೌಟುಂಬಿಕ ದೌರ್ಜನ್ಯ, ಚಿತ್ರಹಿಂಸೆ ಮುಂತಾದವುಗಳಿಂದ ಬಳಲುತ್ತಿರುವ ಮಹಿಳೆಯರು ದೇವಾಲಯದ ಒಳಗೆ ಆಶ್ರಯ ಪಡೆದರು. ಅಂತಿಮವಾಗಿ, ಇದು ಮಹಿಳೆಯರಿಗೆ ಎರಡನೇ ಮನೆಯಾಯಿತು.
ದಿ ಡಿವೋರ್ಸ್ ಟೆಂಪಲ್ (ವಿಚ್ಛೇದನ ದೇವಾಲಯ) ಎಂದೂ ಕರೆಯಲ್ಪಡುವ ಮಾಟ್ಸುಗೋಕಾ ಟೋಕಿಜಿ ದೇವಸ್ಥಾನವು ಶೀಘ್ರದಲ್ಲೇ ಮಹಿಳೆಯರಿಗೆ ಸುರಕ್ಷಿತ ಧಾಮವಾಯಿತು. ಅವರು ಇಲ್ಲಿ ಆಶ್ರಯ ಪಡೆದರು. ತಮ್ಮ ಶೋಚನೀಯ ವೈವಾಹಿಕ ಜೀವನದಿಂದ ರಕ್ಷಣೆ ಮತ್ತು ಸ್ವಾತಂತ್ರ್ಯವನ್ನು ಕಂಡುಕೊಂಡರು.
ಕಾಲಾನಂತರದಲ್ಲಿ, ಬೌದ್ಧ ದೇವಾಲಯವು ತಮ್ಮ ಪಾಲುದಾರರನ್ನು ಶಾಶ್ವತವಾಗಿ ತೊರೆಯಲು ಬಯಸುವ ಮಹಿಳೆಯರಿಗೆ ಅಧಿಕೃತ ವಿಚ್ಛೇದನ ಪ್ರಮಾಣಪತ್ರಗಳನ್ನು ಒದಗಿಸಲು ಪ್ರಾರಂಭಿಸಿತು. ಈ ರೀತಿಯ ವಿಚ್ಛೇದನ ಪ್ರಮಾಣಪತ್ರವನ್ನು ಟ್ಸುಯಿಫುಕು-ಜಿ ಎಂದು ಕರೆಯಲಾಗುತ್ತಿತ್ತು. ಪ್ರಮಾಣಪತ್ರವು ಈ ಮಹಿಳೆಯರಿಗೆ ತಮ್ಮ ಗಂಡನಿಂದ ಕಾನೂನುಬದ್ಧವಾದ ಪ್ರತ್ಯೇಕತೆಯನ್ನು ಪಡೆಯಲು ಸಹಾಯ ಮಾಡಿತು.
ದೇವಾಲಯದ ಅಧಿಕಾರಿಗಳ ನಿಸ್ವಾರ್ಥ ಧ್ಯೇಯವು ಮಹಿಳೆಯರನ್ನು ಮಾಟ್ಸುಗೋಕಾ ಟೋಕಿಜಿ ದೇವಾಲಯವನ್ನು ಕಾಕೆಕೋಮಿ-ಡೆರಾ ಎಂದು ಕರೆಯಲು ಕಾರಣವಾಯಿತು. ಅಂದರೆ ಮಹಿಳೆಯರಿಗೆ ಸಹಕಾರಿಯಾದ ದೇವಾಲಯ ಅಥವಾ ವಿಚ್ಛೇದನ ದೇವಾಲಯ ಎಂದೂ ಕರೆಯುತ್ತಾರೆ. ಪ್ರಸ್ತುತ ಯುಗದಲ್ಲಿ, ದೇವಸ್ಥಾನವು ಯಾವುದೇ ರೀತಿಯ ವಿಚ್ಛೇದನಕ್ಕೆ ಸಂಬಂಧಿಸಿದ, ಕಾನೂನು ಸಮಸ್ಯೆಗಳಿಗೆ ಸಂಬಂಧಿಸಿಲ್ಲ. ಆದರೆ, ಹಿಂದಿನ ದಿನಗಳಲ್ಲಿ ಮಹಿಳೆಯರಿಗೆ ಈ ದೇವಾಲಯವು ಸುರಕ್ಷಿತ ಆಶ್ರಯ ತಾಣವಾಗಿತ್ತು ಎಂಬುದನ್ನು ಅನೇಕರು ನೆನಪಿಸಿಕೊಳ್ಳುತ್ತಾರೆ.
ಮತ್ಸುಗೋಕಾ ಟೋಕಿಜಿ ದೇವಾಲಯವು ಸುಂದರವಾದ ಉದ್ಯಾನವನಗಳಿಂದ ಆವೃತವಾಗಿದೆ ಮತ್ತು ಅದ್ಭುತವಾದ ವಾಸ್ತುಶಿಲ್ಪವನ್ನು ಹೊಂದಿದೆ. ಇಂದು ಈ ದೇವಾಲಯವು ಮಹಿಳಾ ಸಬಲೀಕರಣ ಮತ್ತು ಸ್ವಾತಂತ್ರ್ಯದ ಮಹತ್ವದ ಸಂಕೇತವಾಗಿದೆ.