ಬೆಂಗಳೂರು: ಕೆಪಿಟಿಸಿಎಲ್ ನಿವೃತ್ತ ನೌಕರರ ವೇತನ, ಪಿಂಚಣಿ ಮರು ನಿಗದಿಗೆ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.
ಕೆಪಿಟಿಸಿಎಲ್ ನಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತರು ವೇತನ ಮತ್ತು ಪಿಂಚಣಿ ಮರು ನಿಗದಿಗೆ ಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ಸಹಾಯಹಸ್ತ ಚಾಚಿದೆ. ಮಲ್ಲಿಕಾರ್ಜುನಪ್ಪ ಸೇರಿದಂತೆ ಅನೇಕ ಉದ್ಯೋಗಿಗಳ ವೇತನ ಹಾಗೂ ಪಿಂಚಣಿ ಮರು ನಿಗದಿಗೆ ಸದಸ್ಯ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆಪಿಟಿಸಿಎಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗಿಯ ಪೀಠ ವಜಾಗೊಳಿಸಿ ಆದೇಶಿಸಿದೆ.
ನೌಕರರು ತಮ್ಮ ಕೈಯಲ್ಲಿ ಬಲವಿದ್ದಾಗ ಅನೇಕ ವರ್ಷಗಳ ಕಾಲ ಸಂಸ್ಥೆಗೆ ದುಡಿದಿದ್ದಾರೆ. ಅವರು ಈಗ ನಿವೃತ್ತರಾಗಿ ಜೀವನದ ಸಂಧ್ಯಾಕಾಲದಲ್ಲಿದ್ದು, ವೇತನ ಮತ್ತು ಪಿಂಚಣಿ ನಿಗದಿಗೆ ಕೋರಿದ್ದಾರೆ. ಕಲ್ಯಾಣ ರಾಜ್ಯದಲ್ಲಿ ಪಿಂಚಣಿದಾರರನ್ನು ಮೃದು ಧೋರಣೆಯಿಂದ ನೋಡಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠದ ಆದೇಶದಲ್ಲಿ ತಿಳಿಸಲಾಗಿದೆ.