ಬೆಂಗಳೂರು: ರಾಜ್ಯದ ಆರು ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಲಾಗಿದೆ. ಗೋವಿಂದ ಕಾರಜೋಳ ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದಾರೆ.
ಉಮೇಶ ಕತ್ತಿ –ಬಾಗಲಕೋಟೆ, ಅರವಿಂದ ಲಿಂಬಾವಳಿ –ಬೀದರ್, ಎಂಟಿಬಿ ನಾಗರಾಜ್ –ಕೋಲಾರ, ಮುರುಗೇಶ್ ನಿರಾಣಿ –ಕಲಬುರ್ಗಿ, ಎಸ್ ಅಂಗಾರ -ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. 6 ಸಚಿವರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿದ್ದು, ಯಾರಿಗೂ ತವರು ಜಿಲ್ಲೆಯ ಉಸ್ತುವಾರಿ ದೊರೆತಿಲ್ಲ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಉಮೇಶ್ ಕತ್ತಿ, ಬಾಗಲಕೋಟೆ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಮುರುಗೇಶ್ ನಿರಾಣಿ ಅವರಿಗೆ ನಿರಾಸೆಯಾಗಿದೆ ಎಂದು ಹೇಳಲಾಗಿದೆ.