ಬೆಂಗಳೂರು: ನೀರಿಲ್ಲದ ಕೆರೆ ಕಟ್ಟೆಗಳಲ್ಲಿ ಹೂಳೆತ್ತಲು ವಿಶೇಷ ಆದ್ಯತೆ ನೀಡಿ ಕ್ರಿಯಾ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರದಿಂದ ಜಿಲ್ಲಾ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ.
ನರೇಗಾ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗೆ ಅನುದಾನ ಕೊರತೆಯಾಗುವುದಿಲ್ಲ. ಕೇಂದ್ರ ಸರ್ಕಾರದ ಅನುದಾನ ಹೆಚ್ಚಿನ ಪ್ರಮಾಣದಲ್ಲಿ ಸಿಗಲಿದ್ದು ಇದಕ್ಕೆ ರಾಜ್ಯ ಸರ್ಕಾರವು ಉತ್ತೇಜನ ನೀಡುತ್ತದೆ. ಈ ಅವಕಾಶ ಬಳಸಿಕೊಂಡು ಎಲ್ಲ ಜಿಲ್ಲಾ ಪಂಚಾಯಿತಿಗಳು ಆದ್ಯತೆ ಮೇರೆಗೆ ನೀರಿಲ್ಲದ ಕೆರೆ ಕಟ್ಟೆಗಳಲ್ಲಿ ಗಮನ ಹರಿಸಬೇಕೆಂದು ಹೇಳಲಾಗಿದೆ.
ಮಳೆ ಇಲ್ಲದೆ ಅನೇಕ ಕೆರೆಗಳು ನೀರಿಲ್ಲದೆ ಬರೆದಾಗಿವೆ. ಹೊಳೆತ್ತುವ ಕಾಮಗಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಲು ಅವಕಾಶವಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.