alex Certify ʼಪ್ರಧಾನಮಂತ್ರಿ ಗರೀಬ್​ ಅನ್ನ ಕಲ್ಯಾಣʼ ಯೋಜನೆ ಬಗ್ಗೆ ಕೇಂದ್ರದಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪ್ರಧಾನಮಂತ್ರಿ ಗರೀಬ್​ ಅನ್ನ ಕಲ್ಯಾಣʼ ಯೋಜನೆ ಬಗ್ಗೆ ಕೇಂದ್ರದಿಂದ ಮಹತ್ವದ ಮಾಹಿತಿ

ಕೊರೊನಾ ವೈರಸ್​​ ಸೃಷ್ಟಿಸಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿರುವವರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ್​ ಮಂತ್ರಿ ಗರೀಬ್​ ಅನ್ನ ಕಲ್ಯಾಣ ಯೋಜನೆಯ 4ನೆ ಹಂತದಲ್ಲಿ 7 ರಾಜ್ಯಗಳಲ್ಲಿ ಈಗಾಗಲೇ 14,700 ಟನ್​​ ಆಹಾರ ಧಾನ್ಯಗಳನ್ನ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಧಾನ್​ ಮಂತ್ರಿ ಗರೀಬ್​ ಅನ್ನ ಕಲ್ಯಾಣ ಯೋಜನೆಯ ಮೂರನೇ ಹಂತದಲ್ಲಿ 70.6 ಲಕ್ಷ ಟನ್​​ ಆಹಾರ ಧಾನ್ಯಗಳನ್ನ ಫಲಾನಭುವಗಳಿಗೆ ವಿತರಣೆ ಮಾಡಲಾಗಿತ್ತು.

ಪಡಿತರ ಚೀಟಿಯಡಿಯಲ್ಲಿ ಉಳಿದ ನಾಲ್ಕು ರಾಜ್ಯಗಳಾದ ಆಸ್ಸಾಂ, ಚತ್ತೀಸಗಢ, ದೆಹಲಿ ಹಾಗೂ ಪಶ್ಚಿಮ ಬಂಗಾಳಗಳಿಗೆ ಶೀಘ್ರದಲ್ಲೇ ಯೋಜನೆಯ ಲಾಭ ಸಿಗಲಿದೆ.

ಕೋವಿಡ್​​ನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಜನರನ್ನ ಪಾರು ಮಾಡುವ ಸಲುವಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ದೇಶದ 80 ಕೋಟಿ ಫಲಾನುಭವಿಗಳಿಗೆ ಪರಿಹಾರ ನೀಡುವ ಸಲುವಾಗಿ ಈ ಯೋಜನೆಯನ್ನ ದೇಶದಲ್ಲಿ ಮೊದಲ ಬಾರಿಗೆ ಕಳೆದ ವರ್ಷ 8 ತಿಂಗಳ ಅವಧಿಗೆ ಜಾರಿಗೆ ತರಲಾಗಿತ್ತು.

ಈ ಯೋಜನೆಯ ಮೂರನೇ ಹಂತವನ್ನ ಈ ವರ್ಷದ ಜೂನ್​​ ತಿಂಗಳವರೆಗೆ ವಿಸ್ತರಿಸಲಾಗಿತ್ತು. ಇದೇ ನಾಲ್ಕನೇ ಹಂತವಾಗಿ ಯೋಜನೆಯನ್ನ ನವೆಂಬರ್​ ತಿಂಗಳವರೆಗೆ ವಿಸ್ತರಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...