
ನವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ದೋಷಿ ಎಂದು ಪರಿಗಣಿಸಿರುವ ಚುನಾವಣಾ ಆಯೋಗವು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದೆ.
ಜಾರ್ಖಂಡ್ ನಲ್ಲಿ ನಾಟಕೀಯ ಬೆಳವಣಿಗೆಗಳ ನಂತರ ಕೇವಲ ಅನರ್ಹತೆಗೆ ಾಯೋಗ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಪಾಲರು ಅನರ್ಹತೆಯ ಆದೇಶವನ್ನು ಗೆಜೆಟ್‌ನಲ್ಲಿ ಸೂಚಿಸಿದ ನಂತರ, ಹೇಮಂತ್ ಸೊರೆನ್ ರಾಜೀನಾಮೆ ನೀಡಬೇಕಾಗುತ್ತದೆ. ಅವರ ಜೊತೆ ಅವರ ಮಂತ್ರಿಮಂಡಲವೂ ರಾಜೀನಾಮೆ ನೀಡಲಿದೆ. ಆದರೆ, ಆರು ತಿಂಗಳೊಳಗೆ ಚುನಾವಣಾ ಆಯೋಗ ನಡೆಸುವ ಉಪಚುನಾವಣೆಯಲ್ಲಿ ಅವರು ಮರು ಆಯ್ಕೆಯಾಗಬಹುದು.
ಸೋರೆನ್ ಅವರು ಶಾಸಕ ಸ್ಥಾನಕ್ಕೆ ಯೋಗ್ಯರಲ್ಲ ಎಂದು ಚುನಾವಣಾ ಆಯೋಗವು ಘೋಷಿಸಿದೆ ಎಂದು ಅವರ ಮೂಲಗಳು ತಿಳಿಸಿವೆ ಎಂದು ಜಾರ್ಖಂಡ್‌ನ ಹಿರಿಯ ನಾಯಕರಾದ ಸರಯು ರಾಯ್ ಅವರು ಹೇಳಿದ್ದಾರೆ.
ಹೇಮಂತ್ ಸೊರೆನ್ ಅವರ ಅನರ್ಹತೆಯ ಅಧಿಸೂಚನೆಯು ರಾಜಭವನದಿಂದ ಹೊರಬಂದ ತಕ್ಷಣ, ಅವರು ರಾಜೀನಾಮೆ ನೀಡಬೇಕು ಅಥವಾ ನ್ಯಾಯಾಲಯದಿಂದ ಈ ಅಧಿಸೂಚನೆಗೆ ತಡೆಯಾಜ್ಞೆ ಪಡೆಯಬೇಕಿದೆ ಎಂದು ಹೇಳಲಾಗಿದೆ.