ಬೆಂಗಳೂರು: ಸರ್ಕಾರ ಅಧೀನ ಸಂಸ್ಥೆಗಳ ವಿವಾದ ಕೋರ್ಟ್ ಮೆಟ್ಟಿಲೇರಬಾರದು. ತಮ್ಮಲ್ಲಿಯೇ ವಿವಾದ ಬಗೆಹರಿಸಿಕೊಳ್ಳಬೇಕೆಂದು ಹೈಕೋರ್ಟ್ ಏಕ ಸದಸ್ಯ ಪೀಠ ಪೀಠ ತೀರ್ಪು ನೀಡಿದೆ.
ಸರ್ಕಾರದ ಸಂಸ್ಥೆಗಳು ವ್ಯಾಜ್ಯಗಳ ಪ್ರಮಾಣ ಹೆಚ್ಚಿಸಬಾರದು. ತಮ್ಮ ನಡುವಿನ ವ್ಯಾಜ್ಯಗಳನ್ನು ಪ್ರತ್ಯೇಕ ವೇದಿಕೆಯಲ್ಲಿ ಪರಿಹರಿಸಿಕೊಳ್ಳಿ. ಎಲ್ಲವನ್ನು ನ್ಯಾಯಾಲಯ ತೀರ್ಮಾನಿಸಲಿ ಎಂಬ ನಿಲುವು ಸರಿಯಲ್ಲ ಎಂದು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಕೃಷಿ ಉತ್ಪನ್ನ ಸಮಿತಿಯ ಭೂಮಿ ಬಿ.ಎಂ.ಆರ್.ಸಿ.ಎಲ್. ಸ್ವಾಧೀನಪಡಿಸಿಕೊಂಡಿತ್ತು. ಭೂಸ್ವಾಧೀನದ ಪರಿಹಾರ ಪ್ರಮಾಣ ಪ್ರಶ್ನಿಸಿ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಿತ್ತು. ಆರು ಅಧಿಕಾರಿಗಳ ಸಮಿತಿಯಿಂದಲೇ ವಿವಾದ ಬಗೆಹರಿಸಲು ಸೂಚನೆ ನೀಡಲಾಗಿದೆ. ವಿವಾದ ಬಗೆಹರಿಯದಿದ್ದರೆ ಮಾತ್ರ ಕೋರ್ಟ್ ಗೆ ವಹಿಸಲು ನಿರ್ದೇಶನ ನೀಡಲಾಗಿದೆ.