ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಡ ನಂತರ ಅಲ್ಲಿನ ಜನರು ಬದುಕು ಸಾಗಿಸುವುದಕ್ಕೂ ಹೆಣಗಾಡುವ ಸ್ಥಿತಿಗೆ ಬಂದು ತಲುಪಿದ್ದಾರೆ ಎನ್ನಲಾಗುತ್ತಿದೆ.
ಅಲ್ಲಿ ಕೆಲವರು ತಮ್ಮ ಮಕ್ಕಳು ಹಾಗೂ ತಮ್ಮ ಅಂಗಾಂಗಗಳನ್ನೇ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದಾರೆ ಎಂದು ಹೇಳಲಾಗಿದ್ದು, ಮಕ್ಕಳನ್ನೇ ಹಸಿವಿಗಾಗಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಮಕ್ಕಳನ್ನು 1 ಲಕ್ಷ ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಮೂತ್ರ ಪಿಂಡ ಸೇರಿದಂತೆ ಹಲವು ಅಂಗಗಳನ್ನು ಮಾರಾಟ ಮಾಡುತ್ತಿದ್ದಾರೆ. ಮೂತ್ರ ಪಿಂಡವನ್ನು 1.5 ಲಕ್ಷ ರೂ.ದಿಂದ 2.20 ಲಕ್ಷ ರೂ. ದವರೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ವರದಿಯಾಗುತ್ತಿವೆ.
ಅಲ್ಲಿ ಹಸಿವಿನಿಂದ ಜನರು ಬಳಲುತ್ತಿದ್ದು, ತಮ್ಮ ಮಕ್ಕಳನ್ನೇ ಬಲವಂತದಿಂದ ಮಾರಾಟ ಮಾಡುತ್ತಿದ್ದಾರೆ. ಆರ್ಥಿಕ ತೊಂದರೆಯಿಂದಾಗಿ ಹೆಚ್ಚಾಗಿ ಬಳಲುತ್ತಿರುವುದರಿಂದಾಗಿ ಅಂಗಾಂಗ ದಾನ ಮಾಡುವ ಅನಿವಾರ್ಯತೆ ಎದುರಾಗಿದೆ ಎಂಬ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತಿವೆ.
ಅಲ್ಲಿನ ಬಹುತೇಕ ಕುಟುಂಬಗಳು ಸುಮಾರು ಆರೇಳು ಜನ ಮಕ್ಕಳನ್ನು ಹೊಂದಿವೆ. ಹೀಗಾಗಿ ಒಂದೆರಡು ಮಕ್ಕಳನ್ನು ಮಾರಾಟ ಮಾಡಲು ಅಥವಾ ತಮ್ಮ ಅಂಗಾಂಗ ದಾನ ಮಾಡಲು ಕುಟುಂಬಗಳು ಮುಂದಾಗುತ್ತಿವೆ ಎಂದು ವರದಿಯಾಗಿದೆ.