
ರೆಡಿಟ್ ಬಳಕೆದಾರರೊಬ್ಬರು ಈ ವಿಚಾರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದು ಕೇವಲ 49 ರೂಪಾಯಿಗಳಿಗೆ ಚಂದಾದಾರಿಕೆ ಸಿಗುವಂತೆ ಮಾಡಿದ ಡಿಸ್ನಿ + ಹಾಟ್ಸ್ಟಾರ್ಗೆ ಧನ್ಯವಾದ ಅಂತಾ ಬರೆದುಕೊಂಡಿದ್ದಾರೆ.
ಈ ಪ್ಲಾನ್ ಮೂಲಕ ಓರ್ವ ವ್ಯಕ್ತಿ ಮಾತ್ರ ಹಾಟ್ ಸ್ಟಾರ್ ಬಳಕೆ ಮಾಡಬಹುದಾಗಿದೆ. ಹೆಚ್ಡಿ 720 ಪಿ ರೆಸಲ್ಯೂಷನ್ನಲ್ಲಿ ಈ ಪ್ಲಾನ್ ಲಭ್ಯವಿರಲಿದೆ. ಇದು ಜಾಹಿರಾತು ಸಹಿತ ಯೋಜನೆಯಾಗಿರುವುದರಿಂದ ಯಾವುದೇ ಸಿನಿಮಾಗಳನ್ನು ವೀಕ್ಷಿಸುವ ವೇಳೆ ಜಾಹೀರಾತುಗಳನ್ನೂ ವೀಕ್ಷಿಸುವುದು ಅನಿವಾರ್ಯವಾಗಿರಲಿದೆ.
ಇದನ್ನು ಹೊರತುಪಡಿಸಿ ಡಿಸ್ನಿ + ಹಾಟ್ಸ್ಟಾರ್ 199 ರೂಪಾಯಿ ಮೌಲ್ಯದ ಇನ್ನೊಂದು ಪ್ಲಾನ್ನ್ನು ಪರಿಚಯಿಸಿದೆ. ಇದರಲ್ಲಿ ನಿಮಗೆ ಆರು ತಿಂಗಳುಗಳ ಹಾಟ್ ಸ್ಟಾರ್ ಚಂದಾದಾರಿಕೆ ಸಿಗಲಿದೆ.
ಹಾಟ್ ಸ್ಟಾರ್ನ ಪ್ಲಾನ್ಗಳು
ಪ್ಲಾನ್ ಮೌಲ್ಯ ಪ್ರಯೋಜನಗಳು ಡಿವೈಸ್ ಸಂಪರ್ಕ ಅವಧಿ
ಮೊಬೈಲ್ 499 ರೂ. ಹೆಚ್ಡಿ ಕ್ವಾಲಿಟಿ, ಜಾಹಿರಾತು ಸಹಿತ 1 1 ವರ್ಷ
ಸೂಪರ್ 899 ರೂ. ಹೆಚ್ಡಿ ಕ್ವಾಲಿಟಿ, ಜಾಹಿರಾತು ಸಹಿತ 2 1 ವರ್ಷ
ಪ್ರೀಮಿಯಂ 299 ರೂ. ಹೆಚ್ಡಿ ಕ್ವಾಲಿಟಿ, ಜಾಹಿರಾತು ರಹಿತ 4 1 ತಿಂಗಳು
ಪ್ರೀಮಿಯಂ 1499 ರೂ. ಹೆಚ್ಡಿ ಕ್ವಾಲಿಟಿ, ಜಾಹಿರಾತು ರಹಿತ 4 1 ವರ್ಷ