
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಮನೋಜ್ ಶರ್ಮಾ ಲಕ್ನೋ ಯುಪಿ ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಇದರಲ್ಲಿ ಪೊಲೀಸನ ಗನ್ ಅನ್ನು ಆತನ ಗೆಳತಿ ಹಿಡಿದುಕೊಂಡು ‘ಮೇರಾ ಬಾಲಮ್ ಠಾಣೆದಾರ್’ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಾಳೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಪರ – ವಿರೋಧದ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ಆತನ ಖಾಸಗಿ ಜೀವನದ ವಿಡಿಯೋ ಈ ರೀತಿ ಬಹಿರಂಗ ಪಡಿಸಬಾರದಿತ್ತು ಎಂದು ಕೆಲವರು ಹೇಳಿದರೆ ಮತ್ತಷ್ಟು ಮಂದಿ ಸಮವಸ್ತ್ರದಲ್ಲಿರುವ ಈ ಪೊಲೀಸ್ ಅಧಿಕಾರಿ ಸರ್ಕಾರ ತನಗೆ ನೀಡಿದ್ದ ಗನ್ ಅನ್ನು ಗೆಳತಿಗೆ ನೀಡಿ ಕರ್ತವ್ಯ ಲೋಪ ಎಸಗಿದ್ದಾನೆ. ಹೀಗಾಗಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.