
ಬೆಂಗಳೂರು: ಎಲ್ಲರಿಗೂ ಗ್ಯಾರಂಟಿ ಸೌಲಭ್ಯ ನೀಡುವ ಬದಲು ಅಗತ್ಯ ಇರುವವರಿಗೆ ಮಾತ್ರ ನೀಡಬೇಕೆಂಬ ಚರ್ಚೆ ನಡೆದಿದೆ.
ವಿಧಾನ ಪರಿಷತ್ ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗ್ಯಾರಂಟಿ ಯೋಜನೆಗಳ ಪರಾಮರ್ಶೆ ಹಾಗೂ ಕೆಲವು ಮಾನದಂಡಗಳನ್ನು ವಿಧಿಸಬೇಕೇ, ಬೇಡವೇ ಎನ್ನುವ ಕುರಿತಾಗಿ ಸಲಹೆ ಪಡೆಯಲು ಹಿರಿಯ ಶಾಸಕರ ಸಭೆ ಕರೆಯುವುದಾಗಿ ತಿಳಿಸಿದ್ದಾರೆ.
ಯಾರಿಗೆ ಅಗತ್ಯ ಇದೆಯೋ ಅವರಿಗೆ ಗ್ಯಾರಂಟಿ ಯೋಜನೆ ತಲುಪುವಂತಾಗಲಿ ಎಂದು ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಸಲಹೆಯನ್ನು ಪರಿಗಣಿಸುತ್ತೇನೆ. ಈ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಪರಾಮರ್ಶೆ ಬಗ್ಗೆ ಹಿರಿಯ ಶಾಸಕರ ಸಭೆ ಕರೆಯಲಾಗುವುದು ಎಂದು ಹೇಳಿದ್ದಾರೆ.