alex Certify ವಿಚ್ಛೇದನಕ್ಕೂ ಮೊದಲು ಈ ವಿಷಯಗಳನ್ನು ಚರ್ಚಿಸಿದರೆ ಸಂಬಂಧ ಮುರಿಯುವುದಿಲ್ಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಛೇದನಕ್ಕೂ ಮೊದಲು ಈ ವಿಷಯಗಳನ್ನು ಚರ್ಚಿಸಿದರೆ ಸಂಬಂಧ ಮುರಿಯುವುದಿಲ್ಲ…!

ಅನೇಕ ಬಾರಿ ದಂಪತಿಗಳ ನಡುವಿನ ಮನಸ್ತಾಪ ವಿಚ್ಛೇದನದ ಹಂತವನ್ನು ತಲುಪುತ್ತದೆ. ಒಂದೇ ಸೂರಿನಡಿ ಬದುಕಲಾಗದ ಸ್ಥಿತಿಗೆ ದಂಪತಿ ಬಂದುಬಿಡುತ್ತಾರೆ. ಈ ರೀತಿ ಬಿರುಕು ಮೂಡಿದಾಗ ದಂಪತಿಗಳು ಪರಸ್ಪರ ಚರ್ಚಿಸಿ ಅದನ್ನು ಬಗೆಹರಿಸಿಕೊಳ್ಳಬೇಕು. ಸಂಗಾತಿಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕು.

ಈ ವಿಷಯಗಳು ಸಂಬಂಧ ಮತ್ತು ಭವಿಷ್ಯಕ್ಕೆ ಸಂಬಂಧಿಸಿವೆ. ಈ ಸಂದರ್ಭದಲ್ಲಿ ಸ್ವಂತ ತಪ್ಪುಗಳನ್ನು ಒಪ್ಪಿಕೊಳ್ಳಲು ಹಿಂಜರಿಯಬೇಡಿ. ಸಂಗಾತಿಯ ಮಾತುಗಳನ್ನು ಸಂಪೂರ್ಣವಾಗಿ ಶಾಂತವಾಗಿ ಆಲಿಸಿ. ಇದು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಸಂಬಂಧವನ್ನು ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ.

ವಿಚ್ಛೇದನ ಪಡೆಯುವ ಮೊದಲು ಈ ವಿಷಯಗಳನ್ನು ಚರ್ಚಿಸಿ

ನಾವು ಒಬ್ಬರನ್ನೊಬ್ಬರು ನಂಬುತ್ತೇವೆಯೇ ?

ವಿಚ್ಛೇದನಕ್ಕೆ ಹೆಚ್ಚಾಗಿ ಕಾರಣವಾಗುವುದು ವಿವಾಹೇತರ ಸಂಬಂಧಗಳು. ಪತಿ ಅಥವಾ ಪತ್ನಿಯಲ್ಲಿ ಯಾರಾದರೂ ಒಬ್ಬರು ಈ ರೀತಿ ಅಕ್ರಮ ಸಂಬಂಧಗಳನ್ನು ಇಟ್ಟುಕೊಂಡರೆ ನಂಬಿಕೆ ಮುರಿದು ಹೋಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವಿಚ್ಛೇದನದ ಸಾಧ್ಯತೆಯು ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿ.

 ಮಕ್ಕಳ ಜವಾಬ್ಧಾರಿ ಯಾರದ್ದು ?

ವಿಚ್ಛೇದನಕ್ಕೆ ಮತ್ತೊಂದು ಕಾರಣವೆಂದರೆ ಹಣ. ವಿಚ್ಛೇದನದ ನಂತರ  ಹಣದ ಕೊರತೆಯು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ದಂಪತಿ ಬೇರೆಯಾಗಲು ನಿರ್ಧರಿಸಿದಾಗ ಮಕ್ಕಳ ಶಿಕ್ಷಣ, ಅವರ ಆರೈಕೆ, ಮನೆ ಸಾಲ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯದ ಬಗ್ಗೆ ಮುಕ್ತವಾಗಿ ಕುಳಿತು ಚರ್ಚಿಸಿ. ನಂತರ ಹಣದ ವಿಚಾರದಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುವುದಕ್ಕಿಂತ ವಿಚ್ಛೇದನದ ಮೊದಲು ಇವೆಲ್ಲವನ್ನೂ ಚರ್ಚಿಸುವುದು ಉತ್ತಮ. ಇದು ಸಂಬಂಧಗಳಲ್ಲಿ ಕಹಿಯನ್ನು ತಪ್ಪಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...