ಸುಮಾರು 40 ವರ್ಷಗಳಿಂದ ಬೀದಿ ನಾಯಿಗಳಿಗೆ ಆಶ್ರಯ ಕಲ್ಪಿಸುತ್ತಿರುವ ಆಗ್ರಾದ ಮಹಿಳೆ ಜನರಿಗೆ ವಿದೇಶಿ ತಳಿಗಳ ಮೇಲಿರುವ ವ್ಯಾಮೋಹವೇ ಬೀದಿ ನಾಯಿಗಳಿಗೆ ಈ ಗತಿ ಬರಲು ಕಾರಣ ಎಂದು ಹೇಳಿದ್ದಾರೆ.
ವಿದೇಶಿ ತಳಿಗಳ ಮೇಲಿನ ಅತಿಯಾದ ವ್ಯಾಮೋಹವೇ ಬೀದಿ ನಾಯಿಗಳನ್ನ ನಿರ್ಲಕ್ಷಿಸುವಂತೆ ಮಾಡಿದೆ. ಬೀದಿ ನಾಯಿಗಳ ಮೇಲಿನ ತಾರತಮ್ಯ ಬ್ರಿಟೀಷ್ ಕಾಲದಲ್ಲೇ ಆರಂಭವಾಗಿತ್ತು ಎಂದು ಶ್ವಾನಪ್ರಿಯೆ ವಿನೀತಾ ಅರೋರಾ ಹೇಳಿದ್ದಾರೆ. ದೇಶದಲ್ಲಿ ಬೀದಿ ನಾಯಿಗಳ ಮೇಲಿನ ದುಸ್ಥಿತಿಯ ಬಗ್ಗೆ ಒಡಿಸ್ಸಿ ಸ್ಟ್ರೀಟ್ ಡಾಗ್ಸ್ನಲ್ಲಿ ಬರೆದಿದ್ದೇನೆ ಎಂದು ಹೇಳಿದ್ದಾರೆ.
ರಸ್ತೆ ಅಪಘಾತದಲ್ಲಿ ನನ್ನ ಪ್ರೀತಿಯ ನಾಯಿಯನ್ನ ಕಳೆದುಕೊಂಡ ಬಳಿಕ ನಾನು ಎನ್ಜಿಓ ಆರಂಭಿಸಿದೆ. ಹಾಗೂ ಈ ಎನ್ಜಿಓ ಮೂಲಕ ಬೀದಿ ನಾಯಿಗಳ ರಕ್ಷಣೆ ಮಾಡುತ್ತಿದ್ದೇನೆ. ಆದರೆ, ಜನರು ವಿದೇಶಿ ತಳಿಗಳನ್ನ ಸಾಕುವ ಬದಲು ದೇಸಿ ತಳಿ ಶ್ವಾನಗಳತ್ತ ಗಮನಹರಿಸಬೇಕಿದೆ ಅಂತಾ ಹೇಳಿದ್ರು.