ಲಾಕ್‌ಡೌನ್ ಸಂಬಂಧಿ ನಿರ್ಬಂಧಗಳ ಕಾರಣದಿಂದ ದೇಶದಲ್ಲಿ ಚಿನ್ನದ ವ್ಯಾಪಾರ ಮಂಕಾಗಿದೆ. ಆದರೆ ಮುಂಬರುವ ದಿನಗಳಲ್ಲಿ ಲಾಕ್‌ಡೌನ್ ಸಡಿಲಿಕೆಯಾಗುತ್ತಲೇ ಚಿನ್ನದ ಬೇಡಿಕೆ ಎಂದಿನ ಮಟ್ಟಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ಇವೆ.
ಇವೆಲ್ಲದರ ನಡುವೆ, ದೇಶದ ಚಿನ್ನದ ವ್ಯಾಪಾರಿಗಳು ಕಳೆದ ಒಂಬತ್ತು ತಿಂಗಳಲ್ಲೇ ಅತಿ ದೊಡ್ಡ ರಿಯಾಯಿತಿಗಳನ್ನು ಘೋಷಣೆ ಮಾಡಿದ್ದಾರೆ. ಒಂದು ಔನ್ಸ್ ಚಿನ್ನದ ಮೇಲೆ ಕಳೆದ ವಾರ 731ರೂ.ಗಳಷ್ಟಿದ್ದ ರಿಯಾಯಿತಿ ಈ ವಾರ 878 ರೂಪಾಯಿಗಳಿಗೆ ಏರಿಕೆ ಕಂಡಿದೆ. ಸೆಪ್ಟೆಂಬರ್ ಮಧ್ಯಭಾಗದಿಂದ ಇದುವರೆಗೂ ಕೊಡಲಾಗುತ್ತಿರುವ ಅತಿ ದೊಡ್ಡ ರಿಯಾಯಿತಿ ಇದಾಗಿದೆ.
ಭಾರತದಲ್ಲಿ ಚಿನ್ನದ ಆಮದಿನ ಮೇಲೆ 10.75% ಆಮದು ಸುಂಕವಿದ್ದು ಹೆಚ್ಚುವರಿಯಾಗಿ 3% ಜಿಎಸ್‌ಟಿ ಇದೆ. ಆದರೂ ಸಹ ಬಹಳಷ್ಟು ರಾಜ್ಯಗಳು ಮುಂದಿನ ದಿನಗಳಲ್ಲಿ ಅನ್‌ಲಾಕಿಂಗ್ ಪ್ರಕ್ರಿಯೆಗಳಿಗೆ ಚಾಲನೆ ಕೊಡಲಿರುವ ಕಾರಣ ಚಿನ್ನದ ಬೇಡಿಕೆ ಏರಿಕೆಯಾಗುವ ಸಾಧ್ಯತೆ ಇದೆ.