ರೈಲು ಪ್ರಯಾಣಿಕರಿಗೆ ಮೊದಲೇ ತಯಾರಿಸಿದ ಊಟ ಒದಗಿಸುವ ವ್ಯವಸ್ಥೆಗೆ ಮರುಚಾಲನೆ ನೀಡಲು ರೈಲ್ವೇ ಮಂಡಳಿ ಆದೇಶ ಹೊರಡಿಸಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳಿಗೆ ವಿಶೇಷ ಟ್ಯಾಗ್‌ಗಳನ್ನು ನಿಲ್ಲಿಸಿ, ಸಾಂಕ್ರಾಮಿಕದ ಹಿಂದಿನ ಕಾಲಘಟ್ಟದ ಬೆಲೆಗಳಲ್ಲಿ ಟಿಕೆಟ್‌ಗಳನ್ನು ಪ್ರಯಾಣಿಕರಿಗೆ ನೀಡಲು ನಿರ್ಧಾರವಾಗಿದೆ.
ಗಮನಿಸಿ: ಮನೆ ಮಾಲೀಕನ ಬಳಿ ಪಾನ್ ಕಾರ್ಡ್ ಇಲ್ಲವೆಂದ್ರೂ ಬಾಡಿಗೆದಾರನಿಗೆ ಸಿಗಲಿದೆ HRA ವಿನಾಯಿತಿ
ಇದೇ ವಿಚಾರವಾಗಿ ಭಾರತೀಯ ರೈಲ್ವೇ ಪ್ರವಾಸೋದ್ಯಮ ಹಾಗೂ ಕೆಟರಿಂಗ್‌ಗೆ ಪತ್ರ ಬರೆದಿರುವ ರೈಲ್ವೇ ಮಂಡಳಿ, ತಿನ್ನಲು ಸಿದ್ಧವಿರುವ ಆಹಾರವನ್ನು ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸಲು ಅನುಮತಿ ನೀಡಿದೆ.
“ರೈಲ್ವೇ ಸೇವೆಗಳನ್ನು ಸಹಜತೆಯತ್ತ ತರುವ ದೃಷ್ಟಿಯಲ್ಲಿ ಪ್ರಯಾಣಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ದೇಶಾದ್ಯಂತ ಈಟರಿಗಳು, ರೆಸ್ಟೋರೆಂಟ್‌ಗಳು ಹಾಗೂ ಹೊಟೇಲ್‌ಗಳಲ್ಲಿ ಇದ್ದ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸುವ ದೃಷ್ಟಿಯಿಂದ, ರೈಲುಗಳಲ್ಲಿ ಸಿದ್ಧಪಡಿಸಿದ ಆಹಾರದ ಪೂರೈಕೆಯನ್ನು ಮುಂದುವರೆಸಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ,” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಾಮಾನ್ಯ ರೈಲುಗಳ ಸೇವೆಯನ್ನು ಪುನಾರಂಭಿಸುವುದಾಗಿ ತಿಂಗಳಾರಂಭದಲ್ಲಿ ರೈಲ್ವೇ ಇಲಾಖೆ ಘೋಷಿಸಿತ್ತು.