ಬೆಂಗಳೂರು : ಬೆಂಗಳೂರು ಬಂದ್’ ಗೆ ಇಂದು ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಂದ್ ಇದ್ದರೂ ಕೆಲವು ಗೂಡ್ಸ್ ವಾಹನಗಳು, ಖಾಸಗಿ ವಾಹನಗಳು ಬೆಂಗಳೂರಿನಲ್ಲಿ ಎಂದಿನಂತೆ ಸಂಚರಿಸುತ್ತಿದೆ.
ಬೆಂಗಳೂರಿನ ಕೆ ಆರ್ ಮಾರ್ಕೆಟ್ ನಲ್ಲಿ ರಸ್ತೆಗಿಳಿದ ಆಟೋ ಚಾಲಕರ ಮೇಲೆ ಹಲ್ಲೆಗೆ ಯತ್ನ ನಡೆಸಲಾಗಿದೆ.
ಬಂದ್ ಇದ್ದರೂ ಯಾಕೆ ರಸ್ತೆಗಿಳಿದ್ದೀರಾ ಎಂದು ಕೆಲವು ಸಂಘಟನೆಗಳು ಆಟೋಗಳನ್ನು ಅಡ್ಡಗಟ್ಟಿ ಧಮ್ಕಿ ಹಾಕಿ ಹಲ್ಲೆಗೆ ಯತ್ನ ನಡೆಸಿದೆ. ಆಟೋ ಗಾಜುಗಳನ್ನು ಒಡೆಯಲಾಗಿದ್ದು, ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೆ ಆರ್ ಮಾರುಕಟ್ಟೆಗೆ ಹೂ ಹಣ್ಣುಗಳನ್ನು ಹೊತ್ತುಕೊಂಡು ಕೆಲವು ಗೂಡ್ಸ್ ವಾಹನಗಳು ಬಂದಿಳಿದಿದೆ. ನಗರದಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದು, ಬಲವಂತದ ಬಂದ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದ್ದರು.