ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.
ಆರ್ಥಿಕ ಸಂಕಷ್ಟ, ದುಶ್ಚಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಗಿದ್ದಾರೆ ಎನ್ನಲಾಗಿದೆ. ಆದರೆ ಅವರ ಸಾವಿನ ಬಗ್ಗೆ ಹಲವು ಅನುಮಾನವೂ ವ್ಯಕ್ತವಾಗಿದೆ.
ಎರಡು ವಾರಗಳ ಹಿಂದೆ ಗುರುಪ್ರಸಾದ್ ವಿರುದ್ಧ ಕೇಸ್ ದಾಖಲಾಗಿತ್ತು. 75 ಪುಸ್ತಕಗಳ 5 ಸೆಟ್ ಖರೀದಿಸಿದ್ದ ಗುರುಪ್ರಸಾದ್ ಹಣ ನೀಡಿರಲಿಲ್ಲ. ಒಂದು ಸೆಟ್ ಪುಸ್ತಕಕ್ಕೆ 13,000 ರೂ.ನಂತೆ ಒಟ್ಟು 5 ಸೆಟ್ ಪುಸ್ತಗಳನ್ನು ಖರೀದಿಸಿದ್ದರಂತೆ. 5 ಸೆಟ್ ಪುಸ್ತಕಗಳಿಗೆ 65 ಸಾವಿರ ರೂಪಾಯಿ ಹಣ ನೀಡಬೇಕಾಗಿತ್ತು. ಆದರೆ ಹಣ ನೀಡದೇ ಹೋಗಿದ್ದರು ಎನ್ನಲಾಗಿದೆ.
ಇದೇ ಕಾರಣಕ್ಕೆ ಪುಸ್ತಕದ ಅಂಗಡಿ ಮಾಲೀಕ ಜಯನಗರ ಠಾಣೆಯಲ್ಲಿ ಗುರುಪ್ರಸಾದ್ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುಪ್ರಸಾದ್ ವಿರುದ್ಧ ಎನ್ ಸಿಆರ್ ದಾಖಲಾಗಿತ್ತು ಎಂದು ತಿಳಿದುಬಂದಿದೆ.