ಚಿತ್ರದುರ್ಗ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಇದೇ ಮಾರ್ಚ್ 13ರಂದು ಬೆಳಿಗ್ಗೆ 10 ರಿಂದ 3 ರವರೆಗೆ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ನೇಮಕಾತಿ ಸಂದರ್ಶನ ನಡೆಯಲಿದೆ.
ಸಂದರ್ಶನದಲ್ಲಿ ಪಿಎಸ್ಐ ಅವೆ ಟೆಕ್ ಬೆಂಗಳೂರು ಹಾಗೂ ಮುಂತಾದ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಟ್ರೈನಿ ಮುಂತಾದ ಹುದ್ದೆಗಳಿಗೆ ಕಾರ್ಯನಿರ್ವಹಿಸಲು ಪುರುಷ ಮತ್ತು ಮಹಿಳೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳುವ ಸಂಬಂಧ ಭಾಗವಹಿಸಲಿವೆ.
ಬಿಇ, ಬಿಟೆಕ್ ಹಾಗೂ ಡಿಪ್ಲೊಮಾ, ಐಟಿಐ, ಎಲೆಕ್ಟೀಕಲ್ ಮತ್ತು ಎಲೆಕ್ಟ್ರಾನಿಕ್ಟ್ ವಿದ್ಯಾರ್ಹತೆ ಹೊಂದಿರುವ 100 ಟ್ರೈನಿ ಇಂಜಿನಿಯರ್ ಹಾಗೂ 100 ಜೂನಿಯರ್ ಟ್ರೈನಿ ಇಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಟ್ರೈನಿ ಇಂಜಿನಿಯರ್ ಹುದ್ದೆಗೆ ಮಾಸಿಕ 18 ಸಾವಿರ ವೇತನ ನಿಗಧಿಪಡಿಸಿದ್ದು, ಜೂನಿಯರ್ ಟ್ರೈನಿ ಇಂಜಿನಿಯರ್ಗೆ ಮಾಸಿಕ 16 ಸಾವಿರ ನಿಗಧಿಪಡಿಸಲಾಗಿದೆ.ಅಭ್ಯರ್ಥಿಗಳು ಅಗತ್ಯ ದಾಖಲೆಗಳಾದ ಬಯೋಡಾಟಾ ಪ್ರತಿಗಳು, ಫೋಟೋಸ್, ವಿದ್ಯಾರ್ಹತೆಯ ಜೆರಾಕ್ಸ್ ಪ್ರತಿಗಳೊಂದಿಗೆ ಭಾಗವಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಹಳೇ ವೈಶಾಲಿ ಗೇಟ್ ಹತ್ತಿರ, ಸ್ಟೇಡಿಯಂ ತಿರುವು, ಉದ್ಯೋಗ ವಿನಿಮಯ ಕೇಂದ್ರ ಕಚೇರಿ, ಚಿತ್ರದುರ್ಗ ದೂರವಾಣಿ ಸಂಖ್ಯೆ 7022459064, 8105619020 ಗೆ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ಡಿ.ರವೀಂದ್ರ ತಿಳಿಸಿದ್ದಾರೆ.