ಬೆಂಗಳೂರು: ಹೆಚ್ಒಡಿ ವಿರುದ್ಧ ಕಿರುಕುಳ ಆರೋಪ ಮಾಡಿ ಡಿಪ್ಲೋಮಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಬಳಿಯ ಡಿಫೆನ್ಸ್ ಕಾಲೋನಿಯಲ್ಲಿ ನಡೆದಿದೆ.
ಎನ್ ಟಿಟಿಎಫ್ ಕಾಲೇಜಿನ ಹೆಚ್ಒಡಿ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ. 18 ವರ್ಷದ ಋಷ್ಯಂತ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಫೈನಲ್ ಇಯರ್ ಡಿಪ್ಲೋಮಾ ಇನ್ ಮ್ಯಾಕಾನಿಕ್ ಓದುತ್ತಿದ್ದ.
ಪ್ರಾಜೆಕ್ಟ್ ವರ್ಕ್ ಗೆ ಸಂಬಂಧಿಸಿದಂತೆ ಇಂಡಸ್ಟ್ರಿಯಲ್ ಮ್ಯಾನೇಜ್ಮೆಂಟ್ ಹೆಚ್ಒಡಿ ಗಂಗಾಧರ್, ವಿದ್ಯಾರ್ಥಿಗೆ ನಿಂದಿಸಿದ್ದರಂತೆ. ‘ನೀನು ನೋಡಲು ಶವದಂತೆ ಇದ್ದೀಯಾ. ನಿನ್ನ ಪ್ರಾಜೆಕ್ಟ್ ಕೂಡ ಹಾಗೇ ಇರುತ್ತೆ’ ಎಂದು ಬೈದಿದ್ದರಂತೆ. ಇದನ್ನೇ ಮನಸ್ಸಿಗೆ ಹಚ್ಚಿಕೊಡು ತೀವ್ರವಾಗಿ ನೊಂದಿದ್ದ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.