ಬೆಂಗಳೂರು : ಹೆಚ್ಚುವರಿ ಅಕ್ಕಿ ಪೂರೈಸದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಮರ ಸಾರಿದೆ. ಈ ಹಿನ್ನೆಲೆ ಇಂದು ಕಾಂಗ್ರೆಸ್ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಕುರಿತು ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಕನ್ನಡಿಗರಿಗೆ ಅಕ್ಕಿ ನೀಡದೆ ದ್ವೇಷ ಸಾಧಿಸುತ್ತಿರುವ ಕೇಂದ್ರದ ದ್ವೇಷ ರಾಜಕಾರಣದ ವಿರುದ್ಧ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಪ್ರತಿಭಟನೆಯಲ್ಲಿ ಕನ್ನಡಿಗರೆಲ್ಲರೂ ಪಾಲ್ಗೊಳ್ಳುವ ಮೂಲಕ ನಮ್ಮ ಆಸ್ಮಿತೆ ಮತ್ತು ಸ್ವಾಭಿಮಾನದ ಪ್ರದರ್ಶನ ಮಾಡೋಣ. ಕನ್ನಡಿಗರ ಮೇಲಿನ ಕೇಂದ್ರ ಬಿಜೆಪಿ ಸರ್ಕಾರದ ದೌರ್ಜನ್ಯ ಖಂಡಿಸೋಣ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಕೇಂದ್ರದ BJP ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕನ್ನಡಿಗರನ್ನು ಮಲತಾಯಿ ಮಕ್ಕಳಂತೆ ಉಪಚರಿಸುತ್ತಿದೆ. 2019ರಲ್ಲಿ ರಾಜ್ಯದ ಜನ 25 BJP ಸಂಸದರನ್ನು ಆರಿಸಿ ಕಳಿಸಿದ್ದರು. ಆದರೂ ಉಪಕಾರ ಸ್ಮರಣೆ ಇಲ್ಲದ ಮೋದಿ ಸರ್ಕಾರ ರಾಜ್ಯದ ಕಣ್ಣಿಗೆ ಸುಣ್ಣ ಸವರುತ್ತಲೇ ಇದೆ. ಈಗ ಅಕ್ಕಿ ನೀಡದೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಎಷ್ಟು ದಿನ ಈ ತಾರತಮ್ಯ? ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.