ಬೆಂಗಳೂರು: ನಟ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದಾಗಿ ‘ಡೆವಿಲ್’ ಸಿನಿಮಾ ಚಿತ್ರಿಕರಣಕ್ಕೆ ಅಡ್ಡಿಯಾಗಿದೆ. ಈ ಮಧ್ಯೆ ದರ್ಶನ್ ಸಹೋದರ ದಿನಕರ್ ತೂಗುದೀಪ್, ದರ್ಶನ್ ಗಾಗಿ ಸಿನಿಮಾ ಮಾಡೋದು ಖಚಿತ ಎಂದಿದ್ದಾರೆ.
‘ರಾಯಲ್’ ಸಿನಿಮಾ ಸುದ್ದಿಗೋಷ್ಠಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದಿನಕರ್ ತೂಗುದೀಪ್, ದಿನಕರ್ ಹಾಗೂ ದರ್ಶನ್ ನಡುವೆ ಯಾವುದೂ ಸರಿಯಿಲ್ಲ ಎಂಬ ಮಾತು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಅಣ್ಣ-ತಮ್ಮ ಬೇರೆ ಆಗಿದ್ದೀವಿ ಎಂದು ಯಾರು ಹೇಳಿದ್ದು? ಗಂಡ-ಹೆಂಡತಿ ನಡುವೆ ಹೇಗೆ ಜಗಳ ಬರುತ್ತೋ ಹಾಗೇ ಅಣ್ಣ-ತಮ್ಮ ಎಂದ ಮೇಲೆ ಜಗಳ ಇದ್ದೇ ಇರುತ್ತೇ. ಹಾಗಂತ ಯಾವಾಗಲೂ ಜಗಳ ಮಾಡುತ್ತಲೇ ಇರಲ್ಲ. ಗಂಡ-ಹೆಂಡತಿ ಜಗಳ ಎರಡು ಗಂಟೆ, ಒಂದೆರಡು ದಿನ ಆದ ಮೇಲೆ ಸರಿ ಹೋಗಲ್ಲವೇ ಹಾಗೇ ಅಣ್ಣ-ತಮ್ಮ ನಡುವಿನ ಮನಸ್ತಾಪವೂ ಸರಿ ಹೋಗುತ್ತೆ. ನಾವು ಮಾತನಾಡುತ್ತೇ ಇರುತ್ತೇವೆ. ಆಗೊಮ್ಮೆ, ಈಗೊಮ್ಮೆ ,ತಿಂಗಳಿಗೊಮ್ಮೆ. ನಮ್ಮ ಮಧ್ಯೆ ಮಾತುಕತೆ ನಡೆಯುತ್ತಿರುತ್ತದೆ ಎಂದಿದ್ದಾರೆ.
ಅತ್ತಿಗೆ ವಿಜಯಲಕ್ಷ್ಮೀ ಜೊತೆ ಯಾವಾಗಲೂ ಕಾಂಟ್ಯಾಕ್ಟ್ ನಲ್ಲಿ ಇದ್ದೇನೆ. ಮುಂದೆಯೂ ನಾವು ಚನ್ನಾಗಿಯೇ ಇರುತ್ತೇವೆ. ಈ ಸಿನಿಮಾಗೆ ದರ್ಶನ್ ಸಾಥ್ ನೀಡಬಹುದು ಎಂದರು.
ಇದೇ ವೇಳೆ ದರ್ಶನ್ ಗಾಗಿ ನಾನು ಸಿನಿಮಾ ಮಾಡೇ ಮಾಡುತ್ತೇನೆ. ಅದು ಖಚಿತ. ನಿರ್ಮಾಪಕರ ಲಿಸ್ಟ್ ದರ್ಶನ್ ಕಡೆಗಿದ್ದೆ. ಅವರಿಗೆ ಸಿನಿಮಾ ಮಾಡಬೇಕು ಅಂದಾಗ ಕಥೆ ಕೇಲಲ್ಲ. ದರ್ಶನ್ ನನಗಿಂತ ಇಂಡಸ್ಟ್ರಿಯಲ್ಲಿ ಸೀನಿಯರ್ ಎಂದು ಹೇಳಿದರು.