ಬಾಲಿವುಡ್ನ ಪ್ರಸಿದ್ಧ ಸಿನಿಮಾಗಳಲ್ಲಿ ಒಂದಾದ ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ ಅಕ್ಟೋಬರ್ 22ರಿಂದ ಮತ್ತೆ ಥಿಯೇಟರ್ನಲ್ಲಿ ಕಾಣಿಸಿಕೊಳ್ಳಲು ಸಿದ್ಧವಾಗಿದೆ. ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ ಸಿನಿಮಾ ಬರೋಬ್ಬರಿ 25 ವರ್ಷಗಳಿಂದ ಮುಂಬೈನ ಮರಾಠಾ ಮಂದಿರದಲ್ಲಿ ನಿರಂತರ ಪ್ರದರ್ಶನ ಕಾಣುತ್ತಿತ್ತು. ಆದರೆ ಕೊರೊನಾದಿಂದಾಗಿ ಈ ಪ್ರದರ್ಶನಕ್ಕೆ ಬ್ರೇಕ್ ಬಿದ್ದಿತ್ತು.
ಇದೀಗ ಮತ್ತೊಮ್ಮೆ ಮ್ಯಾಟಿನಿ ಶೋ ಮುಂದುವರಿಸಲು ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ ಸಿನಿಮಾ ಸಿದ್ಧವಾಗಿದೆ. ಮರಾಠಾ ಮಂದಿರದ ಎಕ್ಸಿಕ್ಯೂಟಿವ್ ನಿರ್ದೇಶಕ ಮನೋಜ್ ದೇಸಾಯಿ ಈ ವಿಚಾರವಾಗಿ ಮಾತನಾಡಿದ್ದು ಕೋವಿಡ್ 19ನಿಂದ ಮಾರ್ಚ್ ತಿಂಗಳಲ್ಲಿ ಸಿನಿಮಾ ಪ್ರದರ್ಶನ ರದ್ದುಗೊಂಡ ಬಳಿಕ ತಾವು ದೊಡ್ಡ ಮೊತ್ತದಲ್ಲಿ ನಷ್ಟ ಅನುಭವಿಸಿದ್ದಾಗಿ ಹೇಳಿದ್ದಾರೆ. ಅಲ್ಲದೇ ನಾನು ಇನ್ಮುಂದೆ ಮರಾಠಾ ಮಂದಿರದಲ್ಲಿ ಈ ಸಿನಿಮಾದ ಪ್ರದರ್ಶನವನ್ನು ಮುಂದುವರಿಸಲಿದ್ದೇನೆ ಎಂದು ಹೇಳಿದ್ರು.
ರೊನಾಲ್ಡೊ ಪ್ರತಿಮೆಗೆ ʼತಪ್ಪಾದ ಶರ್ಟ್ʼ…! ಗುರುತಿಸಿದ ಅಭಿಮಾನಿಗಳು ಗರಂ
ಕೊರೊನಾಗಿಂತ ಮುನ್ನ ಈ ಸಿನಿಮಾ ಪ್ರದರ್ಶನದಿಂದ ಬರುತ್ತಿದ್ದ ಲಾಭದ ನಿರೀಕ್ಷೆಯನ್ನು ಈ ಬಾರಿಯೂ ಮಾಡಿದ್ದೇನೆ ಎಂದು ಮನೋಜ್ ಹೇಳಿದ್ದಾರೆ. ಅಕ್ಟೋಬರ್- ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಜನರು ಥಿಯೇಟರ್ಗೆ ಮರಳುತ್ತಾರೆಯೇ..? ಜನರು ಒಟಿಟಿ ವೇದಿಕೆಗಳಿಗೆ ಹೆಚ್ಚು ಒಗ್ಗಿಕೊಂಡಿದ್ದಾರೆಯೇ..? ಈ ರೀತಿಯ ಅನೇಕ ಪ್ರಶ್ನೆಗಳಿಗೆ ಈ ಮೂರು ತಿಂಗಳಲ್ಲಿ ನಿಖರ ಉತ್ತರ ಸಿಗಲಿದೆ. ಎಂದು ಹೇಳಿದ್ರು.
ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೇ ಸಿನಿಮಾ ಭಾರತದ ಸಿನಿಮಾ ಇತಿಹಾಸದಲ್ಲಿಯೇ ಅತೀ ಹೆಚ್ಚು ವರ್ಷಗಳ ಕಾಲ ಥಿಯೇಟರ್ನಲ್ಲಿ ಪ್ರದರ್ಶನ ಕಂಡ ಸಿನಿಮಾವಾಗಿದೆ. ಮುಂಬೈನ ಮರಾಠಾ ಮಂದಿರದಲ್ಲಿ ಈ ಸಿನಿಮಾ ಕಳೆದ 25 ವರ್ಷಗಳಿಂದ ಪ್ರದರ್ಶನ ಕಂಡಿದೆ. ಆದರೆ ಕೋವಿಡ್ 19 ಸಾಂಕ್ರಾಮಿಕದಿಂದ ಥಿಯೇಟರ್ ಪ್ರದರ್ಶನ ರದ್ದುಗೊಂಡ ಬಳಿಕ ಈ ಸಿನಿಮಾ ಪ್ರದರ್ಶನಕ್ಕೂ ಬ್ರೇಕ್ ಬಿದ್ದಿತ್ತು.