alex Certify ಕೋಟ್ಯಾಧಿಪತಿಯಾದ ರಿಕ್ಷಾ ಚಾಲಕ….! ಐಐಟಿ ಪದವಿಧರರಿಗೆ ಕೆಲಸ ಕೊಟ್ಟ ರಿಕ್ಷಾವಾಲನ ಸ್ಪೂರ್ತಿದಾಯಕ ಕತೆಯಿದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಟ್ಯಾಧಿಪತಿಯಾದ ರಿಕ್ಷಾ ಚಾಲಕ….! ಐಐಟಿ ಪದವಿಧರರಿಗೆ ಕೆಲಸ ಕೊಟ್ಟ ರಿಕ್ಷಾವಾಲನ ಸ್ಪೂರ್ತಿದಾಯಕ ಕತೆಯಿದು

ಸಾಧಿಸುವ ಛಲವೊಂದಿದ್ದರೆ ಸಾಕು ಅದೆಂತಹುದೇ ಸವಾಲು ಬಂದರು ಅದನ್ನು ಎದುರಿಸಿ ಜೀವನದಲ್ಲಿ ಯಶಸ್ವಿಯಾಗಬಹುದು. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಬಿಹಾರದಲ್ಲಿ ಅಟೋ ಚಾಲಕರಾಗಿ ಬಳಿಕ ಕೋಟ್ಯಾಧಿಪತಿಯಾದ ದಿಲ್ಖುಷ್ ಕುಮಾರ್. ಬಿಹಾರದ ಮಾಧೇಪುರದ ನಿವಾಸಿಯಾಗಿರುವ ದಿಲ್ಖುಷ್ ಕುಮಾರ್ ಅವರ ಜೀವನಗಾಥೆಯೆ ಎಲ್ಲರಿಗೂ ಸ್ಪೂರ್ತಿ..

ದಿಲ್ಖುಷ್ ಕುಮಾರ್‌ಗೆ ಕೇವಲ 12 ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಪೂರೈಸಲು ಸಾಧ್ಯವಾಯಿತು. ಆದರೆ ಅವರ ಕನಸುಗಳಿಗೆ ಕೊನೆ ಇರಲಿಲ್ಲ. ಬಡತನದಲ್ಲಿದ್ದರೂ ಸಹ ಏನನ್ನಾದರು ಸಾಧಿಸಬೇಕೆಂದು ಹಾತೊರೆಯುತ್ತಿದ್ದರು. ಇದಕ್ಕಾಗಿ ಉದ್ಯಮವೊಂದನ್ನು ಪ್ರಾರಂಭಿಸಲು ಯೋಚಿಸಿದ ದಿಲ್ಖುಷ್ ಕುಮಾರ್ ತಮ್ಮ ರಾಜ್ಯದಲ್ಲಿ ಉತ್ತಮ ಟ್ಯಾಕ್ಸಿ ಸೇವೆಯನ್ನು ನೀಡಿದ್ರೆ ಹೇಗೆ ಎಂಬ ಯೋಜನೆಯನ್ನು ಹಾಕಿಕೊಂಡರು.

ಬಿಹಾರದಲ್ಲಿ ಉತ್ತಮವಾದ ಟ್ಯಾಕ್ಸಿ ಸೇವೆಯನ್ನು ನೀಡುವುದಕ್ಕೆ ದಿಲ್ಖುಷ್ ಕುಮಾರ್ ರಾಡ್‌ಬೇಝ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಆನ್‌ಲೈನ್ ಟ್ಯಾಕ್ಸಿ ಸೇವೆ ನೀಡುವ ಕಂಪನಿಯಾಗಿದ್ದು, ಉಬರ್ ಮತ್ತು ಓಲಾ ದಂತಹ ಟ್ಯಾಕ್ಸಿ ಕಂಪನಿಗಳಿಗಿಂತ ಭಿನ್ನವಾಗಿ ಇದನ್ನು ಪ್ರಾರಂಭಿಸಲಾಯಿತು.

ರಾಡ್‌ಬೇಜ್ ಆನ್‌ಲೈನ್ ಟ್ಯಾಕ್ಸಿ ಸರ್ವೀಸ್‌ನಲ್ಲಿ 50 ಕಿಲೋಮೀಟರ್‌ಗಳಿಗೂ ಹೆಚ್ಚು ದೂರ ಪ್ರಯಾಣಿಸುವ ಅವಕಾಶ ಗ್ರಾಹಕರಿಗೆ ನೀಡಲಾಯಿತು. ಇದರಲ್ಲಿ ವನ್ ಸೈಡ್ ಸಂಚಾರದ ಸರ್ವೀಸ್, ಕಾರ್‌ಪೂಲಿಂಗ್ ಮತ್ತು ರೈಡ್ ಶೇರಿಂಗ್ ಸೇವೆಗಳಿಗೆ ಹೆಚ್ಚು ಮಹತ್ವ ನೀಡಲಾಯಿತು. ಈ ವಿಶೇಷ ಸೇವೆಯು ಪ್ರಯಾಣಿಕರಿಗೆ ಅನುಕೂಲಕರ, ಹಾಗೂ ಕಡಿಮೆ ವೆಚ್ಚದಲ್ಲಿ ಸಂಚರಿಸೋದಕ್ಕೆ ಅನುಕೂಲಕರವಾಯಿತು.

ದಿಲ್ಖುಷ್ ಕುಮಾರ್ ಕಡಿಮೆ ವಿದ್ಯಾಭ್ಯಾಸ ಮಾಡಿರುವ ಕಾರಣ ಪ್ರಾರಂಭದಲ್ಲಿ ಭದ್ರತಾ ಸಿಬ್ಬಂದಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಅಲ್ಲಿ ಅವರನ್ನು ತಿರಸ್ಕರಿಸಲಾಯಿತು. ಮತ್ತೊಂದು ಕೆಲಸದ ಸಂದರ್ಶನದಲ್ಲಿ ಐಫೋನ್ ಲೋಗೋವನ್ನು ಗುರುತಿಸುವ ಸವಾಲಿತ್ತು. ಆದ್ರೆ ಈ ಲೋಗೋವನ್ನು ನೋಡಿಲ್ಲದ ಕಾರಣ ದಿಲ್ಖುಷ್ ಇದರಲ್ಲಿಯು ವಿಫಲವಾದರು. ಇಷ್ಟಾದರು ಸಹ ಅವರು ಕುಗ್ಗಲಿಲ್ಲ. ಇಂದು, ದಿಲ್ಖುಷ್ ಕುಮಾರ್ ಹಾಕಿದ ಶ್ರಮಕ್ಕೆ, ಇಚ್ಛಾಶಕ್ತಿಗೆ ರಾಡ್‌ಬೇಜ್ ಸಂಸ್ಥೆ ಸಾಕ್ಷಿಯಾಗಿ ನಿಂತಿದೆ. ಅವರ ಸಂಸ್ಥೆ ಗುವಾಹಟಿಯ ಐಐಟಿ ಮತ್ತು ಐಐಎಮ್‌ ನಿಂದ ಪದವಿ ಪಡೆದವರನ್ನು ಕೆಲಸಕ್ಕಾಗಿ ನೇಮಕಗೊಳಿಸಿದೆ. ದಿಲ್ಖುಷ್ ಕುಮಾರ್ ಕನಸುಗಳ ಸಾಕಾರಕ್ಕೆ ಈ ಯುವ ಪದವಿಧರರು ಕೊಡುಗೆ ನೀಡುತ್ತಿದ್ದಾರೆ.

ರಿಕ್ಷಾ ಚಾಲಕರಾಗಿ ಯಶಸ್ವಿ ಉದ್ಯಮಿಯಾಗಿ, ಉನ್ನತ ಶಿಕ್ಷಣ ಪಡೆದ ವೃತ್ತಿಪರರಿಗೆ ಉದ್ಯೋಗವನ್ನು ನೀಡುತ್ತಿರುವ ದಿಲ್ಖುಷ್ ಕುಮಾರ್ ಅವರ ಜೀವನದ ಕಥೆ ಅನೇಕರಿಗೆ ಸ್ಫೂರ್ತಿಯಾಗಿದೆ. ದೃಢಸಂಕಲ್ಪವೊಂದಿದ್ದರೆ ಯಾವುದೇ ಕನಸು ತುಂಬಾ ದೊಡ್ಡದಲ್ಲ ಎಂದು ಈ ಮೂಲಕ ಸಾಭೀತಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...