ಭಾರತೀಯ ಚಿತ್ರರಂಗದ ದಂತಕಥೆ ದಿಲೀಪ್ ಕುಮಾರ್‌ರ ಟ್ವಿಟರ್ ಖಾತೆ ನಿಷ್ಕ್ರಿಯವಾಗಲಿದೆ. ಈ ಸಂಬಂಧ ಅವರ ಅಕೌಂಟ್‌ನಲ್ಲಿ ಘೋಷಣೆ ಮಾಡಲಾಗಿದೆ.
ದಿಲೀಪ್ ಕುಮಾರ್‌ರ ವಕ್ತಾರ ಫೈಸಲ್ ಫರೂಖಿ ಈ ಸಂಬಂಧ ಟ್ವೀಟ್‌ನಲ್ಲಿ ವಿವರಿಸಿ, “ಸಾಯಿರಾ ಬಾನುಜೀ ಅವರ ಒಪ್ಪಿಗೆಯೊಂದಿಗೆ, ಬಹಳಷ್ಟು ಚರ್ಚೆ ಮತ್ತು ಸಂವಾದಗಳ ಬಳಿಕ, ನಾನು ನಲ್ಮೆಯ ದಿಲೀಪ್ ಕುಮಾರ್‌ರ ಈ ಖಾತೆಯನ್ನು ಮುಚ್ಚಲು ನಿರ್ಧರಿಸಿದ್ದೇನೆ. ನಿಮ್ಮ ನಿರಂತರ ಬೆಂಬಲ ಹಾಗೂ ಪ್ರೀತಿಗೆ ಧನ್ಯವಾದ” ಎಂದು ತಿಳಿಸಿದ್ದಾರೆ.
ಅಗಲಿದ ಮೇರು ನಟ ದಿಲೀಪ್ ಕುಮಾರ್ಗೆ ಹೃದಯಸ್ಪರ್ಶಿ ನಮನ ಸಲ್ಲಿಸಿದ ಅನಿಲ್ ಕಪೂರ್
ಜುಲೈ 7ರಂದು, ತಮ್ಮ 98ನೇ ವಯಸ್ಸಿನಲ್ಲಿ ನಿಧನರಾದ ದಿಲೀಪ್ ಕುಮಾರ್‌ರ ಟ್ವಿಟರ್ ಖಾತೆಯನ್ನು ಅವರು ಕಾಲವಾದ ಎರಡು ತಿಂಗಳ ಬಳಿಕ ನಿಷ್ಕ್ರಿಯಗೊಳಿಸಲಾಗಿದೆ.
ವಯೋಸಹಜ ಅನಾರೋಗ್ಯದಿಂದ ನರಳುತ್ತಿದ್ದ ದಿಲೀಪ್ ಕುಮಾರ್ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಅಭಿಮಾನಿಗಳು ಅಪಾರ. ಜಾಲತಾಣ ಖಾತೆಯ ಮೂಲಕ ಅವರು ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದರು.