
ಜನಪ್ರಿಯ ಟಿವಿ ಸೀರೀಸ್ ’ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ವೀಕ್ಷಕರಿಗೆ ಜೇಠಾಲಾಲ್ ಎಂಬ ಪಾತ್ರ ಚೆನ್ನಾಗಿ ಗೊತ್ತಿರುತ್ತದೆ. ಆ ಪಾತ್ರದಲ್ಲಿ ನಟ ದಿಲೀಪ್ ಜೋಶಿ ಅಭಿನಯಿಸಿದ್ದಾರೆ.
ಜೋಶಿ ಪುತ್ರಿ ನಿಯಾತಿ ತಮ್ಮ ಸ್ನೇಹಿತನೊಂದಿಗೆ ಡಿಸೆಂಬರ್ 11ರಂದು ಮದುವೆಯಾಗಿದ್ದಾರೆ. ಇದೇ ವೇಳೆ, ತಮ್ಮ ಮದುವೆಗೆಂದು ನಿಯಾತಿ ಅಷ್ಟೇನೂ ವಿಶೇಷವಾದ ಅಲಂಕಾರ ಮಾಡಿಕೊಳ್ಳದೇ ತಮ್ಮ ಅಸಲಿ ರೂಪದಲ್ಲೇ ಫೋಟೋಗಳಲ್ಲಿ ಕಾಣಿಸಿಕೊಂಡಿರುವುದು ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ.
ವಿದ್ಯಾರ್ಥಿನಿಯರಿಗೆ ಹಾಜರಾತಿ ಸಡಿಲಿಕೆ, 240 ದಿನ ಹೆರಿಗೆ ರಜೆ: ಯುಜಿಸಿಯಿಂದ ವಿವಿಗಳಿಗೆ ನಿರ್ದೇಶನ
ತಮ್ಮ ತಲೆಯಲ್ಲಿರುವ ನರೆ ಕೂದಲುಗಳಿಗೆ ಡೈಸಹ ಮಾಡದೇ ಸಹಜವಾಗಿಯೇ ಮದುವೆ ಫೋಟೋಗಳಲ್ಲಿ ಕಾಣಿಸಿಕೊಂಡ ನಿಯಾತಿಗೆ ನೆಟ್ಟಿಗರು ಥಂಬ್ಸ್ಅಪ್ ಕೊಟ್ಟಿದ್ದಾರೆ.
ಆನ್ಲೈನ್ನಲ್ಲಿ ಜೋಶಿ ಪೋಸ್ಟ್ ಮಾಡಿದ ಫೋಟೋಗಳಲ್ಲಿ, ಸಾಂಪ್ರದಾಯಿಕ ಸೀರೆಯಲ್ಲಿ ಮಿಂಚುತ್ತಿರುವ ನಿಯಾತಿರನ್ನು ನೋಡಬಹುದಾಗಿದೆ.
