ಶಿವು ಬಾಲಿಚಕ್ರ ನಿರ್ದೇಶಿಸಿ ಅಭಿನಯಿಸಿರುವ ‘ದಿಲ್ದಾರ್’ ಎಂಬ ಕಿರುಚಿತ್ರ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಈ ಶಾರ್ಟ್ ಫಿಲಂ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.
ಈ ಕಿರು ಚಿತ್ರದಲ್ಲಿ ಶಿವು ಬಾಲಿಚಕ್ರ ಸೇರಿದಂತೆ ಮಾರು, ಸಂಸದ, ಲಾವಣ್ಯ, ಸುಧೀರ್ ಕೋಟಿ, ಸ್ಮಿತಿಕಾ. ವಿ ಹಿರೇನೂರು, ಮಾನ್ಸ್ಟರ್ ಮಂತು, ಸೋನಲ್ ಗಜಕೋಶ ಅಭಿನಯಿಸಿದ್ದು, ಶಿವು ಬಾಲಿಚಕ್ರ ಅವರೇ ನಿರ್ಮಾಣ ಮಾಡಿದ್ದಾರೆ. ಮಾರು ಎಂಪಿ ಅವರ ಸಂಭಾಷಣೆ ಹಾಗೂ ಎಂಜೆ ಪ್ರಜ್ವಲ್ ಸಂಕಲನ ಹಾಗೂ ಮಲ್ಲು ನಾಯಿಕೋಡಿ, ಭೀಮು ಬಂಡಾರಿ ಛಾಯಾಗ್ರಹಣವಿದೆ.