
ಪ್ರಮೋದ್ ಜಯ ರಚಿಸಿ ನಿರ್ದೇಶಿಸಿರುವ ‘ದಿಲ್ ಖುಷ್’ ಸಿನಿಮಾ ಈಗಾಗಲೇ ತನ್ನ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಚಿತ್ರತಂಡ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಇದೇ ಮಾರ್ಚ್ 22ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ,
ಜಯಪ್ರಭಾ ಕಲರ್ ಪ್ರೇಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರಂಜಿತ್ ಮತ್ತು ಕಿರುತೆರೆ ನಟಿ ಸ್ಪಂದನ ಸೋಮಣ್ಣ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಂಗಾಯಣ ರಘು, ಸೂರ್ಯ ಪ್ರವೀಣ್, ಅರುಣಾ ಬಾಲ್ರಾಜ್, ಧರ್ಮಣ್ಣ ಕಡೂರು, ರಾಘು ರಾಮನಕೊಪ್ಪ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜನೆ ನೀಡಿದ್ದು, ಜ್ಞಾನೇಶ್ ಬಿ ಮಾತಾಡ್ ಸಂಕಲನ, ನಿವಾಸ್ ನಾರಾಯಣ್ ಛಾಯಾಗ್ರಹಣವಿದೆ.
