
ಪ್ರಮೋದ್ ಜಯ ನಿರ್ದೇಶನದ ರಂಜಿತ್ ಅಭಿನಯದ ಬಹುನಿರೀಕ್ಷಿತ ‘ದಿಲ್ ಖುಷ್’ ಚಿತ್ರ ನಾಳೆ ರಾಜ್ಯದ್ಯಂತ ಬಿಡುಗಡೆಯಾಗಲಿದೆ. ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಸಿನಿಮಾ ಈಗಾಗಲೇ ತನ್ನ ಟ್ರೈಲರ್ ಮತ್ತು ಹಾಡುಗಳ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದೆ.
ಈ ಚಿತ್ರದಲ್ಲಿ ರಂಜಿತ್ ಮತ್ತು ಸ್ಪಂದನ ಸೋಮಣ್ಣ ಮುಖ್ಯ ಭೂಮಿಕೆಯಲ್ಲಿದ್ದು, ರಂಗಾಯಣ ರಘು, ಅರುಣ ಬಾಲರಾಜ್, ಧರ್ಮಣ್ಣ ಕಡೂರು, ರಾಘು ರಾಮನ ಕೊಪ್ಪ, ಉಳಿದ ಪಾತ್ರವರ್ಗದಲ್ಲಿದ್ದಾರೆ. ಜಯಪ್ರಭ ಕಲರ್ ಪ್ರೇಮ್ಸ್ ನಿರ್ಮಾಣ ಮಾಡಿದೆ. ಜ್ಞಾನೇಶ್ ಬಿ ಮಾತಾಡ್ ಸಂಕಲನ, ನಿವಾಸ್ ನಾರಾಯಣ್ ಛಾಯಾಗ್ರಹಣವಿದೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜನೆ ನೀಡಿದ್ದಾರೆ.