
ಕಳೆದ ತಿಂಗಳು ಮಾರ್ಚ್ 22ಕ್ಕೆ ತೆರೆಕಂಡಿದ್ದ ಪ್ರಮೋದ್ ಜಯ ನಿರ್ದೇಶನದ ‘ದಿಲ್ ಖುಷ್’ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುವ ಮೂಲಕ 25 ದಿನಗಳತ್ತ ಮುನ್ನುಗ್ಗಿದೆ. ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಈ ಚಿತ್ರವನ್ನು ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಮತ್ತು ಪ್ರಭ ಶೇಖರ್ ನಿರ್ಮಾಣ ಮಾಡಿದ್ದು, ರಂಜಿತ್, ಹಾಗೂ ಸ್ಪಂದನ ಸೋಮಣ್ಣ ಸೇರಿದಂತೆ ರಂಗಾಯಣ ರಘು, ಅರುಣ ಬಾಲರಾಜ್, ಧರ್ಮಣ್ಣ ಕಡೂರು, ರಾಘುರಾಮನಕೊಪ್ಪ, ತಾರಾ ಬಳಗದಲ್ಲಿದ್ದಾರೆ. ಜ್ಞಾನೇಶ್ ಬಿ ಮಾತಾಡ್ ಸಂಕಲನ, ನಿವಾಸ್ ನಾರಾಯಣ್ ಛಾಯಾಗ್ರಹಣ, ಅಶೋಕ್ ಮತ್ತು ವಿಕ್ರಂ ಸಾಹಸ ನಿರ್ದೇಶನ, ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜನೆ ನೀಡಿದ್ದಾರೆ.
