ಬೆಂಗಳೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆ ಭಾಗವಾಗಿ ಡಿಜಿಟಲ್ ವಹಿವಾಟಿನ ಮೇಲೂ ನಿಗಾ ಇಡಲಾಗುವುದು.
ಉದಾಹರಣೆಗೆ ಯಾವುದೇ ವ್ಯಕ್ತಿ 20 ಜನರ ಖಾತೆಗೆ ತಲಾ ಎರಡು ಸಾವಿರ ಹಣ ವರ್ಗಾವಣೆ ಮಾಡಿದ್ದರೆ ಅದನ್ನು ಸಂಶಯಾಸ್ಪದ ವಹಿವಾಟು ಎಂದು ಪರಿಗಣಿಸಿ ಅದರ ಮೇಲೆ ನಿಗಾ ವಹಿಸಲಾಗುವುದು. ಜೊತೆಗೆ ಬ್ಯಾಂಕುಗಳಿಂದ ಪ್ರತಿದಿನ ವಹಿವಾಟುಗಳ ವಿವರ ಪಡೆದು ಅದರಲ್ಲಿ ಸಂಶಯಾಸ್ಪದ ವಹಿವಾಟುಗಳು ಕಂಡುಬಂದರೆ ಅಂತಹವರ ಮೇಲೆ ಕಣ್ಣಿಡಲಾಗುವುದು.