alex Certify ʼಡಿಜಿಟಲ್ʼ ಪಾವತಿ ಜಾಗೃತಿ ಸಪ್ತಾಹ: ʼವೀಸಾʼ ದಿಂದ ಮಹತ್ವದ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡಿಜಿಟಲ್ʼ ಪಾವತಿ ಜಾಗೃತಿ ಸಪ್ತಾಹ: ʼವೀಸಾʼ ದಿಂದ ಮಹತ್ವದ ಸಲಹೆ

ಮಳಿಗೆಯಲ್ಲಿ ಶಾಪಿಂಗ್ ಮಾಡುವಾಗಲೇ ಇರಲಿ, ಆನ್ ಲೈನ್ ನಲ್ಲಿಯೇ ಇರಲಿ, ಪ್ರಯಾಣ ಮಾಡುವಾಗಲೇ ಇರಲಿ ಇಂದು ಇಂಡಿಯಾ ಡಿಜಿಟಲ್ ಮೂಲಕವೇ ಪಾವತಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸುರಕ್ಷಿತವಾಗಿ ಮತ್ತು ಬುದ್ಧಿವಂತಿಕೆಯಿಂದ ಪಾವತಿ ಮಾಡುವುದು ಮುಖ್ಯವಾದ್ದರಿಂದ ಈ ಸಲದ ಡಿಜಿಟಲ್ ಪಾವತಿ ಜಾಗೃತಿ ಸಪ್ತಾಹ ಸಂದರ್ಭದಲ್ಲಿ ವೀಸಾ ನೀಡುತ್ತಿರುವ ಈ ಸಲಹೆಗಳನ್ನು ಗಮನಿಸಿ.

ಸುರಕ್ಷಿತ ಸಂಪರ್ಕರಹಿತ ಪಾವತಿಗಾಗಿ ಫೋನ್‌ ನಲ್ಲಿ ಕಾರ್ಡ್‌ ಗಳನ್ನು ಸೇವ್ ಮಾಡಿ: ಬ್ಯಾಂಕಿಂಗ್ ಮತ್ತು ಪಾವತಿ ಆಪ್‌ ಗಳಲ್ಲಿ ನಿಮ್ಮ ಕಾರ್ಡ್ ವಿವರಗಳನ್ನು ಸೇರಿಸಿ. ಈ ಮೂಲಕ ಫೋನ್‌ ಅನ್ನು ಟ್ಯಾಪ್ ಮಾಡಿ ಕಾರ್ಡ್ ಬಳಸಿ ಪಾವತಿ ಮಾಡಬಹುದು.

ಯಾವಾಗಲೂ ಸುರಕ್ಷಿತ ಪಾವತಿ ವಿಧಾನಗಳನ್ನು ಬಳಸಿ: ವಂಚನೆ ತಡೆಯಲು ಹೆಚ್ಚುವರಿ ಎನ್‌ಕ್ರಿಪ್ಶನ್, ಬಯೋಮೆಟ್ರಿಕ್ ದೃಢೀಕರಣ ಮತ್ತು ಟೋಕನೈಸೇಶನ್ ವ್ಯವಸ್ಥೆ ಇರುವ ಸುರಕ್ಷಿತ ಡಿಜಿಟಲ್ ಪಾವತಿ ವಿಧಾನಗಳನ್ನು ಆರಿಸಿಕೊಳ್ಳಿ.

ಸಂಪರ್ಕರಹಿತ ಕಾರ್ಡ್ ಬಳಸಿ: ಇಎಂವಿಸಿಓ® ಚಿಪ್ ಇರುವ ಸಂಪರ್ಕರಹಿತ ಕಾರ್ಡ್‌ ಗಳ ಮೂಲಕ (ಕಾರ್ಡ್ ಮೇಲೆ ವೈ-ಫೈ ತರಹದ ಚಿಹ್ನೆ ಇರುತ್ತದೆ) ಪಿಓಎಸ್ ಟರ್ಮಿನಲ್‌ ನಲ್ಲಿ ಕಾರ್ಡ್ ಟ್ಯಾಪ್ ಮಾಡಿ ನಿಮ್ಮ ಕಾರ್ಡ್ ಅನ್ನು ನಿಮ್ಮ ಕೈಯಲ್ಲೇ ಹಿಡಿದುಕೊಂಡು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಪಾವತಿ ಮಾಡಿ.

ಬ್ಯಾಂಕಿಂಗ್ ಆಪ್‌ ಗಳ ಮೂಲಕ ವಹಿವಾಟು ನಡೆಸುವುದನ್ನು ನಿಯಂತ್ರಿಸಿ: ಸಂಪರ್ಕರಹಿತ, ಇ-ಕಾಮರ್ಸ್, ಎಟಿಎಂ ವಿತ್ ಡ್ರಾವಲ್ ಮತ್ತು ಅಂತರರಾಷ್ಟ್ರೀಯ ಕಾರ್ಡ್ ವಹಿವಾಟುಗಳನ್ನು ಬ್ಯಾಂಕಿಂಗ್ ಆಪ್‌ ನಲ್ಲಿ ಸುಲಭವಾಗಿ ಆನ್ ಅಥವಾ ಆಫ್ ಮಾಡಿ. ನೀವು ಎಷ್ಟು ಖರ್ಚು ಮಾಡಬೇಕು ಎಂಬ ಮಿತಿಯನ್ನು ನಮೂದಿಸಬಹುದು ಮತ್ತು ಕಾರ್ಡ್ ಎಲ್ಲಿ, ಹೇಗೆ ಬಳಸಬೇಕು ಎಂಬುದನ್ನೂ ಸೆಟ್ ಮಾಡಬಹುದು.

ತಕ್ಷಣವೇ ಬರುವ ಅಲರ್ಟ್‌ ಗಳ ಮೂಲಕ ವಹಿವಾಟುಗಳ ಮೇಲೆ ನಿಗಾ ಇಡಿ: ಪ್ರತೀ ಖರ್ಚಿನ ಕುರಿತು ತಿಳಿಯಲು ತಕ್ಷಣ ನೋಟಿಫಿಕೇಷನ್ ಬರುವ ವ್ಯವಸ್ಥೆಯನ್ನು ಬಳಸಿಕೊಳ್ಳಿ ಮತ್ತು ಬ್ಯಾಂಕಿಂಗ್ ಆಪ್‌ ಗಳಲ್ಲಿ ತಕ್ಷಣವೇ ಆಯಾ ವಹಿವಾಟುಗಳನ್ನು ಪರಿಶೀಲಿಸಿ.

ಕ್ರೆಡಿಟ್ ಕಾರ್ಡ್ ಪಾವತಿಯ ಲಾಭ ಪಡೆಯಿರಿ: ಬ್ಯಾಂಕ್ ಮತ್ತು ಪಾವತಿ ಸಂಸ್ಥೆಗಳಿಂದ ದೊರಕುವ ಕ್ಯಾಶ್‌ ಬ್ಯಾಕ್, ರಿವಾರ್ಡ್ ಪಾಯಿಂಟ್‌ ಗಳು ಮತ್ತು ವಿಶೇಷ ರಿಯಾಯಿತಿಗಳನ್ನು ಬಳಸಿ. ಇಎಂಐ ಆಯ್ಕೆಗಳು ಮತ್ತು ಶುಲ್ಕ ಮನ್ನಾಗಳನ್ನು ಬುದ್ಧಿವಂತಿಕೆಯಿಂದ ಬಳಸಿ ಪ್ರತೀ ವಹಿವಾಟಿನಲ್ಲಿ ಹೆಚ್ಚಿನ ಲಾಭ ಪಡೆಯಿರಿ.

ಈ ಸಲಹೆಗಳನ್ನು ಪಾಲಿಸಿಕೊಳ್ಳುವ ಮೂಲಕ ವೇಗವಾಗಿ, ಸುರಕ್ಷಿತವಾಗಿ ಮತ್ತು ಸುಲಭವಾಗಿ ಡಿಜಿಟಲ್ ಪಾವತಿ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...