ಬೆಂಗಳೂರು: ಬ್ರಿಟಿಷರ ಕಾಲದ ನಕ್ಷೆಗೆ ಪರ್ಯಾಯವಾಗಿ ಡಿಜಿಟಲ್ ನಕ್ಷೆ ತಯಾರಿಸಲು ಚಾಲನೆ ನೀಡಲಾಗಿದೆ. ಕನಕಪುರದ ಚಿಕ್ಕೊಪ್ಪ ಗ್ರಾಮದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ.
ತಂತ್ರಜ್ಞಾನ ಆಧಾರಿತ ಮರು ಭೂಮಾಪನ ಸರ್ವೆ ಮಾಡಿಸಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಇದರಿಂದ ರೈತರಿಗೆ ಕರಾರು ದಾಖಲೆಗಳನ್ನು ನೀಡಲು ಸಾಧ್ಯವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ನಂತರ ಹಂತ ಹಂತವಾಗಿ ರಾಜ್ಯಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.