alex Certify ದುಶ್ಚಟವಾಗದಿರಲಿ ಸಾಮಾಜಿಕ ಜಾಲತಾಣ ಬಳಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಶ್ಚಟವಾಗದಿರಲಿ ಸಾಮಾಜಿಕ ಜಾಲತಾಣ ಬಳಕೆ

ಡಿಜಿಟಲ್ ತಂತ್ರಜ್ಞಾನ ನಮ್ಮ ಜೀವನವನ್ನು ಸುಲಭಗೊಳಿಸಿದೆ. ಸಾಮಾಜಿಕ ಮಾಧ್ಯಮಗಳು ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ.

ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಾರದಿಂದ ಹಿಡಿದು ಹೊಸ ಸಂಬಂಧ ಬೆಳೆಸುವವರೆಗೆ ಎಲ್ಲ ಕೆಲಸವನ್ನು ಮಾಡಬಹುದು. ಸಾಮಾಜಿಕ ಮಾಧ್ಯಮಗಳು ದೂರದವರನ್ನು ಹತ್ತಿರಕ್ಕೆ ಸೆಳೆದಿದೆ. ಅನೇಕ ಪ್ರತಿಭೆಗಳು ರಾತ್ರೋರಾತ್ರಿ ಪ್ರಸಿದ್ಧಿಗೆ ಬಂದಿವೆ. ಆದ್ರೆ ಇದೇ ಡಿಜಿಟಲ್, ಸಾಮಾನ್ಯ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.

ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಕಳೆಯುತ್ತಿದ್ದಾರೆ. ಸೆಲ್ಫಿ ಅಥವಾ ಫೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕ್ತಿದ್ದಾರೆ. ಅಲ್ಲಿ ಬರುವ ಕಮೆಂಟ್, ಲೈಕ್ ಲೆಕ್ಕ ಹಾಕ್ತಾರೆ. ಆದ್ರೆ ಇದು ವೈಯಕ್ತಿಕ ಸಂಬಂಧವನ್ನು ಹಾಳು ಮಾಡಿದೆ. ಜನರಲ್ಲಿ ಒಂಟಿತನ ಹೆಚ್ಚಾಗಿದೆ. ಕುಟುಂಬಸ್ಥರ ಮಧ್ಯೆ ಮಾತುಕತೆ ಇಲ್ಲದಂತಾಗಿದೆ.

ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಜನರಲ್ಲಿ ಒತ್ತಡ ಹೆಚ್ಚಾಗಿದೆ. 24 ಗಂಟೆ ಜನರು ಅಪ್ಡೇಟ್ ಆಗಲು ಬಯಸ್ತಿದ್ದಾರೆ. ಪ್ರತಿ 2 ನಿಮಿಷಕ್ಕೆ ಫೋನ್ ಹಿಡಿದು ಜನರು ಚೆಕ್ ಮಾಡ್ತಿದ್ದಾರೆ. ಇದು ಜನರ ಮೆದುಳಿನ ಮೇಲೆ ಪ್ರಭಾವ ಬೀರುತ್ತಿದೆ.

ಸದಾ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿರುವುದ್ರಿಂದ ಖಿನ್ನತೆ, ಕೋಪ ಜಾಸ್ತಿಯಾಗಿದೆ. ನಿದ್ದೆ ಮಾಡುವ ಬದಲು ಮೊಬೈಲ್ ನೋಡುವ ಜನರು ಆನ್ಲೈನ್ ಆಟದ ಮೂಲಕ ಸಮಯ ಹಾಳು ಮಾಡ್ತಿದ್ದಾರೆ. ಫೋನ್ ಪರಿಶೀಲಿಸುವುದ್ರಲ್ಲಿ ಮಗ್ನರಾಗಿ ಯಾವುದೇ ವಿಷ್ಯದ ಬಗ್ಗೆ ಗಮನ ನೀಡ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿ ತಂದೆ-ತಾಯಿ ಜೊತೆ ಮಾತನಾಡುವುದನ್ನು, ಹೊರಗೆ ಸುತ್ತಾಡುವುದನ್ನು ಮರೆತಿದ್ದೇವೆ.

ಡಿಜಿಟಲ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂಬುದು ಇದ್ರ ಉದ್ದೇಶವಲ್ಲ. ಕೆಲಸ ಮರೆತು ಸಾಮಾಜಿಕ ಜಾಲತಾಣದಲ್ಲಿ ಮಗ್ನರಾಗುವುದು ತಪ್ಪು. ದಿನಕ್ಕಿಷ್ಟು ಸಮಯ ಮಾತ್ರ ಸಾಮಾಜಿಕ ಜಾಲತಾಣ ವೀಕ್ಷಣೆ ಮಾಡಿದ್ರೆ ಸಾಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...