ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಆನ್ಲೈನ್ ಗೇಮ್ ನಲ್ಲಿ ಪರಿಚಯನಾದ ಭಾರತೀಯ ಗೆಳೆಯ ಸಚಿನ್ ನನ್ನು ಪ್ರೀತಿಸಿ ಗಡಿ ದಾಟಿ ಭಾರತಕ್ಕೆ ಬಂದಿದ್ದಳು. ಸದ್ಯ, ಸೀಮಾ ಹೈದರ್ ಹಾಗೂ ಸಚಿನ್ ಗೆ ಸಂಕಷ್ಟ ಎದುರಾಗಿದ್ದು, ಸೀಮಾ ಹೈದರ್ ಅವರ ಮಾಜಿ ಪತಿ ಗುಲಾಮ್ ಹೈದರ್ ಅವರು ಸೀಮಾ ಮತ್ತು ಅವರ ಪತಿ ಸಚಿನ್ ಮೀನಾ ಅವರಿಗೆ ತಲಾ 3 ಕೋಟಿ ರೂ.ಗಳ ನೋಟಿಸ್ ಕಳುಹಿಸಿದ್ದಾರೆ.
ತನ್ನ ಮಕ್ಕಳನ್ನು ಮರಳಿ ಕರೆತರಲು ಭಾರತೀಯ ವಕೀಲರನ್ನು ನೇಮಿಸಿಕೊಂಡ ಗುಲಾಮ್ ಹೈದರ್, ಸೀಮಾ ಹೈದರ್ ಅವರ ಸಹೋದರ ಎಂದು ಹೇಳಿಕೊಂಡ ಡಾ.ಎಪಿ ಸಿಂಗ್ ಅವರಿಗೆ 5 ಕೋಟಿ ರೂ.ಗಳ ನೋಟಿಸ್ ಕಳುಹಿಸಿದ್ದಾರೆ.ಗುಲಾಮ್ ಹೈದರ್ ಅವರ ವಕೀಲ ಅಲಿ ಮೊಮಿನ್ ಅವರು ಮೀನಾ ದಂಪತಿಗೆ ಕ್ಷಮೆಯಾಚಿಸುವಂತೆ ಮತ್ತು ಒಂದು ತಿಂಗಳೊಳಗೆ ದಂಡವನ್ನು ಜಮಾ ಮಾಡುವಂತೆ ಕೇಳಿದ್ದಾರೆ, ಇಲ್ಲದಿದ್ದರೆ ಅವರು ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹಾಗೂ ನಾಲ್ವರು ಮಕ್ಕಳನ್ನು ಕರೆದುಕೊಂಡು ಪ್ರಿಯತಮನಿಗಾಗಿ ಭಾರತಕ್ಕೆ ಬಂದಿದ್ದಕ್ಕೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಾಕಿಸ್ತಾನದ ಉನ್ನತ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಅನ್ಸಾರ್ ಬರ್ನಿ ಅವರನ್ನು ಗುಲಾಮ್ ಹೈದರ್ ತನ್ನ ನಾಲ್ಕು ಮಕ್ಕಳನ್ನು ಕಸ್ಟಡಿಗೆ ಪಡೆಯಲು ಸಹಾಯಕ್ಕಾಗಿ ಸಂಪರ್ಕಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ದೃಢಪಡಿಸಿದೆ.ಭಾರತದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಪವರ್ ಆಫ್ ಅಟಾರ್ನಿಯನ್ನು ಕಳುಹಿಸಲಾಗಿದೆ ಎಂದು ಬರ್ನಿ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದರು.
ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಆನ್ಲೈನ್ ಗೇಮ್ ನಲ್ಲಿ ಪರಿಚಯನಾದ ಭಾರತೀಯ ಗೆಳೆಯನನ್ನು ಪ್ರೀತಿಸಿ ಭಾರತಕ್ಕೆ ಪ್ರವೇಶಿಸಲು ಗಡಿ ದಾಟುವ ಮೂಲಕ ಸುದ್ದಿಯಾಗಿದ್ದಳು.