ಕೋಲ್ಕತಾ: ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಉಚ್ಚಲನ್‌ನ ಸುಜಿತ್ ಡಾನ್ (37) ಎಂಬ ವಿಕಲಚೇತನ ವ್ಯಕ್ತಿ ತನ್ನ ಎಲ್ಲಾ ಸಾಧನೆಗಳಿಂದ ತನ್ನ ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಹುಟ್ಟಿನಿಂದಲೇ ಕೈಗಳಿಲ್ಲದ ಅವರು ದೈಹಿಕ ಕಷ್ಟದ ನಡುವೆಯೂ ಕಾಲುಗಳಿಂದ ಟ್ರ್ಯಾಕ್ಟರ್ ಓಡಿಸುತ್ತಾರೆ. ಇವರ ಎಲ್ಲಾ ದೈನಂದಿನ ಕಾರ್ಯಕ್ಕೂ ಕಾಲುಗಳೇ ಇವರ ಕೈ.
ಸುಜಿತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ ಐಟಿಐ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ.
ಐಟಿಐ ತೇರ್ಗಡೆಯಾದ ನಂತರ, ಸುಜಿತ್ ಡಿವಿಸಿ ಉದ್ಯೋಗ ಪರೀಕ್ಷೆಯಲ್ಲಿ ತೇರ್ಗಡೆಯಾದರು. 2011ರಲ್ಲಿ ರಾಜ್ಯ ರಾಜಕೀಯದಲ್ಲಾದ ಬದಲಾವಣೆಗಳು ಪರಿಸ್ಥಿತಿಯನ್ನು ತಲೆಕೆಳಗಾಗಿಸಿದವು. ಆ ನಂತರ ಪರಿಚಯದವರ ಬಳಿ ಟ್ರ್ಯಾಕ್ಟರ್ ಓಡಿಸಲು ಕಲಿತರು. ಸುಜಿತ್ ಪ್ರಸ್ತುತ ತನ್ನ ಟ್ರ್ಯಾಕ್ಟರ್ ಓಡಿಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಕೃಷಿಗೂ ಸಹಾಯ ಮಾಡುತ್ತಾರೆ.
ಸಾಧಿಸುವ ಗುರಿ ಇದ್ದರೆ ಏನು ಬೇಕಾದರೂ ಮಾಡಲು ಸಾಧ್ಯ. ಎಲ್ಲವೂ ಇದ್ದೂ ಏನೂ ಇಲ್ಲ ಎಂದು ಕೊರಗುವವರಿಗೆ ಸಜಿತ್ ಜೀವಂತ ಉದಾಹರಣೆ.