ಸೀರೆ, ಭಾರತೀಯ ನಾರಿಯರ ಸಾಂಪ್ರದಾಯಿಕ ಉಡುಗೆ. ಇಂದಿನ ಫ್ಯಾಷನ್ ಟ್ರೆಂಡ್ ಏನೇ ಇರಲಿ. ಎಷ್ಟೇ ಮಾಡರ್ನ್ ಡ್ರೆಸ್ ಗಳು ಮಾರುಕಟ್ಟೆ ಗೆ ಬಂದರೂ ಸೀರೆ ಮಾತ್ರ ತನ್ನ ಸ್ಥಾನ ಬಿಟ್ಟುಕೊಟ್ಟಿಲ್ಲ. ಮಹಿಳೆಯರ ಅಭಿರುಚಿಗೆ ತಕ್ಕಂತೆ ಬದಲಾಗುತ್ತ, ವಿಭಿನ್ನ ರೀತಿಯ ಡಿಸೈನರ್ ಬ್ಲೌಸ್ ಗಳಿಂದ, ಸೀರೆಯ ಆಕರ್ಷಕ ಸೆರಗಿನಿಂದ ಹೆಂಗಳೆಯರ ಅಚ್ಚುಮೆಚ್ಚಿನ ಉಡುಪಾಗಿದೆ.
ಸೀರೆಗೆ ಮೆರಗು ನೀಡುವುದು ಅದರ ಸೆರಗು. ಸೆರಗಿಗೆ ಕುಚ್ಚು ಕಟ್ಟುವುದರಿಂದ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ. ಸೆರಗಿನ ತುದಿಯಲ್ಲಿ ಕಟ್ಟುವ ಕುಚ್ಚು ಸೀರೆಯನ್ನು ಮತ್ತಷ್ಟು ಅಂದಗೊಳಿಸುತ್ತದೆ.
ಸೀರೆಗೆ ಕುಚ್ಚು ಹಾಕುವುದು ಒಂದು ವಿಶಿಷ್ಠ ಕಲೆ. ಸೀರೆಯ ಬಣ್ಣ, ವಿನ್ಯಾಸಗಳಿಗೆ ಹೊಂದಿಕೆಯಾಗುವಂತೆ ವಿಧ ವಿಧ ವಿನ್ಯಾಸದ ಕುಚ್ಚನ್ನು ಹೆಣೆಯಬಹುದಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ಮಣಿ, ಗೋಲ್ಡನ್ ಬೀಡ್ಸ್, ಗೋಲ್ಡನ್ ದಾರ ಬಳಸಿ ಒಂದೇ ಗಂಟಿನ ಕುಚ್ಚು, 2-3 ಸ್ಟೆಪ್ ಉದ್ದದ ಕುಚ್ಚು ಹೀಗೆ ನಾನಾ ಬಗೆಯ ಕುಚ್ಚುಗಳನ್ನು ಹೆಣೆದು ಸೀರೆಗಳನ್ನು ಮತ್ತಷ್ಟು ಆಕರ್ಷಕಗೊಳಿಸಬಹುದಾಗಿದೆ.