ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು ಶಾಸ್ತ್ರ ದಲ್ಲಿ ಸ್ವಸ್ತಿಕ್ ಗೆ ಮಹತ್ವದ ಸ್ಥಾನ ನೀಡಲಾಗಿದೆ. ಸಾಮಾನ್ಯವಾಗಿ ಕೆಂಪು ಬಣ್ಣದಲ್ಲಿ ಸ್ವಸ್ತಿಕವನ್ನು ಬರೆಯಲಾಗುತ್ತದೆ. ಆದ್ರೆ ವಾಸ್ತು ಶಾಸ್ತ್ರದಲ್ಲಿ ಬೇರೆ ಬೇರೆ ಬಣ್ಣದ ಸ್ವಸ್ತಿಕದ ಬಗ್ಗೆ ಹೇಳಲಾಗಿದೆ. ಅದು ನಿಮ್ಮ ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡಬಲ್ಲದು.
ಅರಿಶಿನದಲ್ಲಿ ಸ್ವಸ್ತಿಕ ಬಿಡಿಸುವುದ್ರಿಂದ ಅನೇಕ ಲಾಭಗಳಿವೆ. ಉತ್ತರ ದಿಕ್ಕಿನ ಗೋಡೆ ಮೇಲೆ ಹಳದಿ ಬಣ್ಣದ ಸ್ವಸ್ತಿಕ ಬಿಡಿಸುವುದ್ರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ.
ಮಂಗಳ ಕಾರ್ಯಕ್ಕೆ ಕೆಂಪು ಬಣ್ಣದ ಸ್ವಸ್ತಿಕ ಶುಭಕರ. ಕೇಸರಿ, ಸಿಂಧೂರ, ರಂಗೋಲಿ, ಕುಂಕುಮವನ್ನು ಇದಕ್ಕೆ ಬಳಸಬಹುದು.
ಕಲ್ಲಿದ್ದಿಲಿನಿಂದ ಬಿಡಿಸಿದ ಕಪ್ಪು ಸ್ವಸ್ತಿಕ ಕೆಟ್ಟ ದೃಷ್ಟಿ ಮತ್ತು ಕೆಟ್ಟ ಸಮಯದಿಂದ ಮುಕ್ತಿ ನೀಡುತ್ತದೆ. ಮನೆಯ ಮೇಲೆ ಅಥವಾ ಮನೆಯವರ ಮೇಲೆ ಕೆಟ್ಟ ದೃಷ್ಟಿ ಬಿದ್ದಿದ್ದರೆ ಅಥವಾ ವ್ಯವಹಾರಗಳಲ್ಲಿ ಕೆಟ್ಟದಾಗುತ್ತಿದ್ದರೆ ಮನೆಯ ಮುಖ್ಯದ್ವಾರದ ಮೇಲೆ ಕಲ್ಲಿದ್ದಲಿನಿಂದ ಸ್ವಸ್ತಿಕವನ್ನು ಬಿಡಿಸಿ.
ರಾತ್ರಿ ಕೆಟ್ಟ ಕನಸುಗಳು, ಭಯಾನಕ ಕನಸುಗಳು ಬೀಳುತ್ತಿದ್ದರೆ ಮಲಗುವ ಮೊದಲು ಕುಂಕುಮದಲ್ಲಿ ಸ್ವಸ್ತಿಕವನ್ನು ಬಿಡಿಸಿ. ರಾತ್ರಿ ಒಳ್ಳೆ ನಿದ್ರೆ ನಿಮ್ಮದಾಗುತ್ತದೆ.
ಅಶುಭ ಸ್ಥಳಗಳಲ್ಲಿ ಎಂದೂ ಸ್ವಸ್ತಿಕವನ್ನು ಬಿಡಿಸಬೇಡಿ. ಶೌಚಾಲಯ, ಸ್ನಾನ ಗೃಹ ಅಥವಾ ಇನ್ನಾವುದೇ ಅಶುಭ ಸ್ಥಳಗಳಲ್ಲಿ ಸ್ವಸ್ತಿಕವನ್ನು ಬಿಡಿಸಬೇಡಿ. ದಾರಿದ್ರ್ಯ, ರೋಗ, ಆರ್ಥಿಕ ಮುಗ್ಗಟ್ಟು, ಒತ್ತಡ ಕಾಡಲು ಶುರುವಾಗುತ್ತದೆ.