ಎಷ್ಟು ಪ್ರಯತ್ನಿಸಿದರೂ ದೇಹ ತೂಕ ಕಡಿಮೆ ಆಗುತ್ತಿಲ್ಲ ಎಂದು ಬೇಸರಿಸಿಕೊಳ್ಳುವ ಮುನ್ನ ಇಲ್ಲಿ ಕೇಳಿ. ನೀವು ಈ ಹಣ್ಣುಗಳನ್ನು ಸೇವಿಸುತ್ತಿರುವ ಕಾರಣಕ್ಕೆ ದೇಹ ತೂಕ ಕಡಿಮೆ ಆಗದಿರಬಹುದು. ಆ ಕೆಲವು ಹಣ್ಣುಗಳು ಇಲ್ಲಿವೆ.
ಬೆಣ್ಣೆ ಹಣ್ಣು ಅಥವಾ ಅವಕಾಡೊ ಹಣ್ಣನ್ನು ವಾರಕ್ಕೆರಡು ಬಾರಿ ಸೇವಿಸುವುದರಿಂದ ಯಾವುದೇ ಸಮಸ್ಯೆಗಳಿಲ್ಲ. ಆದರೆ ನೀವು ಈ ಹಣ್ಣನ್ನು ನಿತ್ಯ ಸೇವಿಸಿದರೆ ಅಥವಾ ಜ್ಯೂಸ್ ಕುಡಿಯುತ್ತಿದ್ದರೆ ನಿಮ್ಮ ತೂಕ ಹೆಚ್ಚಾಗುತ್ತದೆ.
ಆರೋಗ್ಯ ವೃದ್ಧಿಸುವ ಹಣ್ಣುಗಳಲ್ಲಿ ಒಂದು. ಇದರಲ್ಲಿ ಸಕ್ಕರೆ ಮತ್ತು ಫ್ಯಾಟ್ ಪ್ರಮಾಣ ಅತ್ಯಧಿಕವಾಗಿದೆ. ಇದನ್ನು ನಿತ್ಯ ಸೇವಿಸುವುದರಿಂದ ನಿಮ್ಮ ದೇಹ ತೂಕ ಹೆಚ್ಚಬಹುದು.
ಡಯಟ್ ನೆಪದಲ್ಲಿ ವಿಪರೀತ ಒಣಹಣ್ಣುಗಳನ್ನು ನೀವು ಸೇವಿಸುತ್ತಿದ್ದೀರಾ, ಹಾಗಿದ್ದರೆ ನಿಮ್ಮದೇಹ ತೂಕ ಹೆಚ್ಚಲು ಇದೂ ಕಾರಣವಾಗಬಹುದು. ಬಾಳೆಹಣ್ಣು ದಿನಕ್ಕೊಂದು ತಿಂದರೆ ಸಾಕು, ಅದಕ್ಕಿಂತ ಹೆಚ್ಚು ತಿಂದರೆ ತೂಕ ಕಡಿಮೆಯಾಗುವ ಬದಲು ಹೆಚ್ಚಬಹುದು.