alex Certify ಚಳಿಗಾಲಕ್ಕೆ ತಯಾರಾಯ್ತು ವಿಚಿತ್ರ ಮಿನಿ ಸ್ಕರ್ಟ್…​! ಬೆಲೆ ಕೇಳಿದ್ರೆ ಹೌಹಾರ್ತಿರಾ…!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲಕ್ಕೆ ತಯಾರಾಯ್ತು ವಿಚಿತ್ರ ಮಿನಿ ಸ್ಕರ್ಟ್…​! ಬೆಲೆ ಕೇಳಿದ್ರೆ ಹೌಹಾರ್ತಿರಾ…!!

ಇಟಾಲಿಯನ್ ಐಷಾರಾಮಿ ಬಟ್ಟೆ ಕಂಪೆನಿಯಾಗಿರುವ ಡೀಸೆಲ್, ವಿಲಕ್ಷಣ ಬಟ್ಟೆಗಳಿಗೆ ಸಕತ್​ ಫೇಮಸ್​. ಇದೀಗ ಅಂಥದ್ದೇ ವಿಚಿತ್ರ ಬಟ್ಟೆಯೊಂದನ್ನು ಇದು ತಯಾರಿಸಿದ್ದು, ನೆಟ್ಟಿಗರ ಹುಬ್ಬೇರಿಸಿದೆ.

ಡೀಸೆಲ್ ಈ ವರ್ಷದ ಆರಂಭದಲ್ಲಿ ತನ್ನ ಚಳಿಗಾಲದ ಫ್ಯಾಷನ್ ರನ್‌ವೇ ಶೋನ ಭಾಗವಾಗಿ ಮೈಕ್ರೋ-ಮಿನಿ ಸ್ಕರ್ಟ್ ಅನ್ನು ಬಿಡುಗಡೆ ಮಾಡಿದೆ. ವಿಲಕ್ಷಣ ಉತ್ಪನ್ನ ಎನಿಸಿಕೊಂಡಿರುವ ಈ ಡ್ರೆಸ್​ ಅನ್ನು ಓರ್ವ ರೂಪದರ್ಶಿ ಧರಿಸಿದ್ದು ಅದೀಗ ವೈರಲ್​ ಆಗಿದೆ. ಸ್ಕರ್ಟ್ ಸೊಂಟದ ಸುತ್ತಲೂ ಭದ್ರಪಡಿಸಿದ ಚರ್ಮದ ಪಟ್ಟಿಯನ್ನು ಹೊಂದಿದೆ. ಇದನ್ನು ನೋಡಿದರೆ ವಿಚಿತ್ರ ಎನಿಸುವಂತಿದೆ.

ನೋಡಲು ತುಂಡುಡುಗೆಯಂತಿರುವ ಇದರ ಬೆಲೆ ಮಾತ್ರ 1000 ಡಾಲರ್​, ಅಂದರೆ ಅಂದಾಜು 82 ಸಾವಿರ ರೂಪಾಯಿಗಳು ! ಈ ಸ್ಕರ್ಟ್​ ಮುಂಭಾಗದಲ್ಲಿ ಐಕಾನಿಕ್ ‘ಡಿ’ ಲೋಗೋವನ್ನು ಹೊಂದಿದೆ. ಇದು ಹಿಂಭಾಗದಲ್ಲಿ ವೆಲ್ಕ್ರೋ ಮುಚ್ಚುವಿಕೆ ಹೊಂದಿದ್ದು ಒಟ್ಟಿನಲ್ಲಿ ಡ್ರೆಸ್​ ನೋಡುಗರನ್ನು ಗೊಂದಲದಲ್ಲಿ ಸಿಲುಕಿಸುತ್ತದೆ.

ಚಳಿಗಾಲದಲ್ಲಿ ಇಷ್ಟು ಚಿಕ್ಕ ಡ್ರೆಸ್​ ಹಾಕಿಕೊಂಡರೆ ಗತಿಯೇನು ಎಂದು ಹಲವರು ತಮಾಷೆಯಾಗಿ ಕಮೆಂಟ್​ ಮಾಡಿದ್ದಾರೆ.

https://twitter.com/dameandconfused/status/1587953542135939079?ref_src=twsrc%5Etfw%7Ctwcamp%5Etweetembed%7Ctwterm%5E1587953542135939079%7Ctwgr%5E91ffec32b6d95a53ba89b471dcad0c96e2e26631%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fdiesels-skirt-worth-whopping-rs-82k-has-netizens-confused-new-6328717.html

https://twitter.com/mightbechule/status/1588043568979259393?ref_src=twsrc%5Etfw%7Ctwcamp%5Etweetembed%7Ctwterm%5E1588043568979259393%7Ctwgr%5E91ffec32b6d95a53ba89b471dcad0c96e2e26631%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fdiesels-skirt-worth-whopping-rs-82k-has-netizens-confused-new-6328717.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...