
ಬೆಂಗಳೂರು: ಒಂದೇ ರಾತ್ರಿ 8 ಲಾರಿಗಳ 16 ಬ್ಯಾಟರಿ, 150 ಲೀಟರ್ ಡೀಸೆಲ್ ಕಳವು ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ರೈಲು ನಿಲ್ದಾಣದ ಬಳಿ 12 ಬ್ಯಾಟರಿ, ಹಳೆ ಬಸ್ ನಿಲ್ದಾಣದ ಬಳಿ 4 ಬ್ಯಾಟರಿ ಕಳವು ಮಾಡಲಾಗಿದೆ. ಪಾಲನಜೋಗನಹಳ್ಳಿ ಸಮೀಪ ನಿಲ್ಲಿಸಿದ್ದ ಲಾರಿಗಳಿಂದ 150 ಲೀಟರ್ ಡೀಸೆಲ್ ಕಳವು ಮಾಡಲಾಗಿದೆ. ಸ್ಕಾರ್ಪಿಯೋ ವಾಹನದಲ್ಲಿ ಬಂದಿದ್ದ ಮೂವರು ಬ್ಯಾಟರಿ, ಡೀಸೆಲ್ ಕಳವು ಮಾಡಿ ಪರಾರಿಯಾಗಿದ್ದಾರೆ.
ಬ್ಯಾಟರಿ, ಡೀಸೆಲ್ ಕಳವು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.