
ಹಳೆಯ ಡೀಸೆಲ್ ಕಾರುಗಳನ್ನು ಎಲೆಕ್ಟ್ರಿಕ್ ಇಂಜಿನ್‌ಗಳನ್ನಾಗಿ ಪರಿವರ್ತಿಸಿದಲ್ಲಿ ಮಾತ್ರವೇ ರಾಷ್ಟ್ರ ರಾಜಧಾನಿ ಪ್ರದೇಶದ ರಸ್ತೆಗಳಲ್ಲಿ ಈ ವಾಹನಗಳನ್ನು ಚಲಿಸಬಹುದಾಗಿದೆ.
ದೆಹಲಿಯು ಆಂತರಿಕ ದಹನ ಇಂಜಿನ್‌ಗಳ (ಐಸಿಇ) ವಾಹನಗಳಿಗೆ ತನ್ನ ರಸ್ತೆಯನ್ನು ಮುಕ್ತವಾಗಿಸುತ್ತದೆ ಎಂದ ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್, ಡೀಸೆಲ್ ವಾಹನಗಳ ರೆಟ್ರೋಫಿಟ್ಟಿಂಗ್ ಮೂಲಕ ಅವುಗಳ ಬಳಕೆಯನ್ನು ನಿಗದಿತ 10 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಬಳಸಲು ಅನುವಾಗುತ್ತದೆ ಎಂದಿದ್ದಾರೆ.
“ದೆಹಲಿ ಈ ಐಸಿಇ ಇಂದ ಎಲೆಕ್ಟ್ರಿಕ್ ರೆಟ್ರೋಫಿಟ್ಟಿಂಗ್‌ಗೆ ಮುಕ್ತವಾಗಿದೆ ! ಫಿಟ್ ಆಗಿರುವ ವಾಹನಗಳನ್ನು ಡೀಸೆಲ್‌ನಿಂದ ಎಲೆಕ್ಟ್ರಿಕ್ ಇಂಜಿನ್‌ಗೆ ಮಾರ್ಪಾಡು ಮಾಡಬಹುದು. ಪರೀಕ್ಷಾ ಏಜೆನ್ಸಿಗಳಿಂದ ಅನುಮೋದನೆ ಪಡೆದ ಶುದ್ಧವಾದ ಎಲೆಕ್ಟ್ರಿಕ್ ಕಿಟ್‌ಗಳ ಬಳಕೆಗೆ ಉತ್ಪಾದಕರಿಗೆ ಇಲಾಖೆ ಅನುಮತಿ ನೀಡಲಿದೆ. ಒಮ್ಮೆ ಅನುಮೋದನೆ ಪಡೆದಲ್ಲಿ ಈ ವಾಹನಗಳು 10 ವರ್ಷ ಮೀರಿ ಚಲಿಸಬಲ್ಲವು,” ಎಂದು ಕೈಲಾಶ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.