ಬೆಂಗಳೂರು: ರಾಜ್ಯದಲ್ಲಿ ಮುಂಗಾರುಪೂರ್ವ ಮಳೆಯ ಆಬ್ಬರಿಸಿದ್ದು, ವಾಡಿಕೆಗಿಂತ ಶೇಕಡ 43 ರಷ್ಟು ಹೆಚ್ಚಿನ ಮಳೆಯಾಗಿದೆ. ಉತ್ತಮ ಪೂರ್ವ ಮುಂಗಾರು ಮಳೆಯ ಕಾರಣ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಇದೇ ಸಂದರ್ಭದಲ್ಲಿ ಸಿಡಿಲು, ಮಳೆಗೆ 46 ಮಂದಿ ಮೃತಪಟ್ಟಿದ್ದಾರೆ
ಮುಂಗಾರು ಆಗಮನಕ್ಕೆ ಮೊದಲೇ ರಾಜ್ಯದಲ್ಲಿ ಒಂದು ತಿಂಗಳ ಅಂತರದಲ್ಲಿ ಸಿಡಿಲು ಮಳೆಯಿಂದ 46 ಜನ ಸಾವನ್ನಪ್ಪಿದ್ದು, 400ಕ್ಕೂ ಅಧಿಕ ಜಾನುವಾರು ಮೃತಪಟ್ಟಿವೆ. ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
2024ರ ಏಪ್ರಿಲ್ ನಿಂದ ಮೇ 21ರವರೆಗೆ ರಾಜ್ಯದಲ್ಲಿ ಸಿಡಿಲಿನಿಂದ 35 ಜನ ಸಾವನ್ನಪ್ಪಿದ್ದಾರೆ. ಗೋಡೆ ಕುಸಿತ, ಮರ ಬಿದ್ದು, ಇತರೆ ಕಾರಣಗಳಿಂದ 11 ಜನ ಮೃತಪಟ್ಟಿದ್ದಾರೆ. 246 ಕುರಿ, ಮೇಕೆ, ಕರು, 146 ಜಾನುವಾರು ಮೃತಪಟ್ಟಿದ್ದು, ಸಿಡಿಲಿನಿಂದ ಮೃತಪಟ್ಟವರೆ ಹೆಚ್ಚು ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿ ತಿಳಿಸಿದೆ.