ಬೆಳಗಾವಿ(ಸುವರ್ಣಸೌಧ): ಮಹಿಳಾ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗುವ ಶಿಶುಪಾಲನಾ ರಜೆಯನ್ನು ವಿಧುರರಿಗೂ ನೀಡುವ ಬಗ್ಗೆ ಪರಿಶೀಲಿಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಎಸ್.ವಿ. ಸಂಕನೂರ ಮತ್ತು ಕಾಂಗ್ರೆಸ್ ನ ನಾಸಿರ್ ಅಹಮದ್ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.
ಮಹಿಳಾ ನೌಕರರಿಗೆ ಗರಿಷ್ಠ ಆರು ತಿಂಗಳವರೆಗೆ ಮಕ್ಕಳ ಸಂಖ್ಯೆ ಪರಿಗಣಿಸದೆ ಅತ್ಯಂತ ಕಿರಿಯ ಮಗು 18 ವರ್ಷದವರೆಗೆ ಶಿಶು ಪಾಲನಾ ರಜೆ ಮಂಜೂರು ಮಾಡಬಹುದಾಗಿದೆ. ರಾಜ್ಯದಲ್ಲಿ ಕೇವಲ ಸರ್ಕಾರ ಮಹಿಳಾ ನೌಕರರಿಗೆ ಮಾತ್ರ ಅನ್ವಯವಾಗುವ ಶಿಶು ಪಾಲನಾ ರಜೆಯನ್ನು ಪತ್ನಿ ನಿಧನ ಹೊಂದಿದ ಪುರುಷ ಸರ್ಕಾರಿ ನೌಕರರಿಗೆ ನೀಡಬೇಕೆಂಬ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.