alex Certify ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ವಾ…..? ಅನುಸರಿಸಿ 10-3-2-1 ಸೂತ್ರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ವಾ…..? ಅನುಸರಿಸಿ 10-3-2-1 ಸೂತ್ರ….!

ಪ್ರಪಂಚದಲ್ಲಿ ಅನೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಾರೆ. ಯಾವುದೇ ರೋಗದ ಸಮಸ್ಯೆ ಅವರಿಗೆ ಇರುವುದಿಲ್ಲ. ಆದ್ರೆ ರಾತ್ರಿ ನಿದ್ರೆ ಮಾತ್ರ ಸರಿಯಾಗಿ ಬರುವುದಿಲ್ಲ. ಇದಕ್ಕೆ ಜೀವನ ಶೈಲಿ ಮುಖ್ಯ ಕಾರಣ.

ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಯ ವೈದ್ಯರು ಇದಕ್ಕೆ ಪರಿಹಾರ ಹೇಳಿದ್ದಾರೆ. ಈ ಸಮಸ್ಯೆಯಿಂದ ಹೊರ ಬರಲು 10-3-2-1 ಸೂತ್ರವನ್ನು ಕಂಡುಹಿಡಿದ್ದಾರೆ. ಈ ಸೂತ್ರವನ್ನು ಅನುಸರಿಸುವ ಮೂಲಕ, ಯಾವುದೇ ಔಷಧಿ ಅಥವಾ ಚಿಕಿತ್ಸೆಯಿಲ್ಲದೆ ಸುಲಭವಾಗಿ ಪ್ರತಿದಿನ ಉತ್ತಮ ನಿದ್ರೆ ಮಾಡಬಹುದು. ಇದು ಬ್ರಿಟನ್ ನಲ್ಲಿ ಈಗ ತೀವ್ರ ಚರ್ಚೆಯಾಗ್ತಿದೆ.

ಭಾರತೀಯ ಮೂಲದ ವೈದ್ಯ ರಾಜ್ ಕರಣ್, ಟಿಕ್ ಟಾಕ್ ನಲ್ಲಿ ಈ ಸೂತ್ರವನ್ನು ಹಂಚಿಕೊಂಡಿದ್ದಾರೆ. 10-3-2-1 ಟ್ರಿಕ್ ನ್ನು ಅವರು ವಿವರವಾಗಿ ವಿವರಿಸಿದ್ದಾರೆ. ಮಲಗುವ ಸಮಯಕ್ಕೆ 10 ಗಂಟೆಗಳ ಮೊದಲು, ಕೆಫೀನ್ ಸೇವನೆ ಪ್ರಮಾಣವನ್ನು ಕಡಿಮೆ ಮಾಡಿ ಎಂದವರು ಹೇಳಿದ್ದಾರೆ. ಅಂದರೆ ಟೀ-ಕಾಫಿ, ತಂಪು ಪಾನೀಯಗಳನ್ನು ಸೇವನೆ ಮಾಡಬೇಡಿ ಎಂದಿದ್ದಾರೆ. ರಾತ್ರಿ 10 ಗಂಟೆಗೆ ಹಾಸಿಗೆಗೆ ಹೋಗುವವರಿದ್ದರೆ ಮಧ್ಯಾಹ್ನ 12 ಗಂಟೆ ನಂತ್ರ ಕೆಫೀನ್ ಸೇವನೆ ಮಾಡಬೇಡಿ.

ಮಲಗುವ 3 ಗಂಟೆಗಳ ಮೊದಲು, ಭಾರೀ ಆಹಾರ ಅಥವಾ ಪಾನೀಯಗಳನ್ನು ಸೇವಿಸುವುದನ್ನು ನಿಲ್ಲಿಸಿ. ಆಹಾರ ಜೀರ್ಣಿಸಿಗೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. 3 ಗಂಟೆಗಳ ಮೊದಲು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯಬೇಕು. 3 ಗಂಟೆ ಮೊದಲೇ ಆಹಾರ ಸೇವನೆ ಮಾಡಿದ್ರೆ ಗ್ಯಾಸ್ ಅಥವಾ ಅಜೀರ್ಣ ಸಮಸ್ಯೆ ಕಾಡುವುದಿಲ್ಲ. ಹಾಸಿಗೆ ಮೇಲೆ ಕೆಲ ಸಮಯ ದೇಹ ನೇರವಾಗಿದ್ದರೆ, ಬೇಗ ನಿದ್ರೆ ಬರುತ್ತದೆ.

ನಿದ್ರೆಗೆ 2 ಗಂಟೆ ಮುಂಚಿತವಾಗಿ ನಿತ್ಯದ ಕೆಲಸವನ್ನು ಮುಗಿಸಬೇಕು. ಕೆಲಸ ಮುಗಿದ್ರೆ ಮನಸ್ಸು ನಿರಾಳವಾಗುತ್ತದೆ. ಹಾಸಿಗೆಯಲ್ಲಿ ಮಲಗಿದಾಗ ಯಾವುದೇ ಕಚೇರಿ ಅಥವಾ ಮನೆ ಕೆಲಸವನ್ನು ನೆನೆಪಿಸಿಕೊಂಡು ಕಿರಿಕಿರಿ ಅನುಭವಿಸಬೇಡಿ.

ನಿದ್ರೆ ಮಾಡುವ ಒಂದು ಗಂಟೆ ಮೊದಲು ಟಿವಿ, ಲ್ಯಾಪ್ ಟಾಪ್ ಮತ್ತು ಮೊಬೈಲ್ ಸ್ವಿಚ್ ಆಫ್ ಮಾಡಿ. ಅಂದರೆ ಸ್ಕ್ರೀನ್ ನಿಂದ ದೂರವಿರಿ. ಸ್ಕ್ರೀನ್ ನಿಂದ ಹೊರಹೊಮ್ಮುವ ನೀಲಿ ಬೆಳಕು ಕಣ್ಣುಗಳಲ್ಲಿ ನೋವನ್ನು ಉಂಟು ಮಾಡುತ್ತದೆ. ಅದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆಗೆ ಒಂದು ಗಂಟೆ ಮೊದಲು ಎಲ್ಲಾ ಸ್ಕ್ರೀನ್ ಗಳನ್ನು ಆಫ್ ಮಾಡುವುದರಿಂದ ಕಣ್ಣು ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ. ಬೇಗ ನಿದ್ರೆ ಬರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...