ನಿಮಗೆ ರಾತ್ರಿ ಬೇಗನೆ ನಿದ್ದೆ ಬರ್ತಾ ಇಲ್ವಾ? ಅಥವಾ ರಾತ್ರಿ ಪೂರಾ ನಿದ್ದೆ ಮಾಡಲು ನೀವು ಕಸರತ್ತು ಮಾಡ್ತೀರಾ? ಹಾಗಿದ್ರೆ ಇದನ್ನು ನೀವು ಓದಲೇಬೇಕು. ಕೆಲವೊಂದು ಸಿಂಪಲ್ ಟಿಪ್ಸ್ ಮೂಲಕ ರಾತ್ರಿ ನೀವು ಕೂಡ ಆರಾಮಾಗಿ ನಿದ್ದೆ ಮಾಡಬಹುದು. ಅದ್ಹೇಗೆ ಅನ್ನೋದನ್ನು ನೋಡೋಣ.
ರಾತ್ರಿ ಮಲಗುವ ಮುನ್ನ ಸ್ವಲ್ಪ ಹೊತ್ತು ಪುಸ್ತಕ ಓದುವ ಅಭ್ಯಾಸ ಮಾಡಿಕೊಳ್ಳಿ.
ರಾತ್ರಿ ಮಲಗುವ ಮುನ್ನ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಬೇಡಿ.
ನೀವು ಸಂಗೀತ ಪ್ರಿಯರಾಗಿದ್ದಲ್ಲಿ ಮೆಲುಧ್ವನಿಯ ಹಾಡುಗಳನ್ನು ಕೇಳುತ್ತ ಮಲಗಿ. ತನ್ನಿಂತಾನೇ ನಿದ್ದೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ.
ಉಲ್ಟಾ ಲೆಕ್ಕ ಮಾಡಿದ್ರೂ ನಿದ್ದೆ ಬರುತ್ತದೆ. 200, 199, 198 ಹೀಗೆ ಸೊನ್ನೆವರೆಗೂ ಸಂಖ್ಯೆಗಳನ್ನು ಹೇಳುತ್ತ ಬನ್ನಿ. ಆಗ ನಿದ್ರಾದೇವಿ ನಿಮ್ಮನ್ನು ಆಲಂಗಿಸಿಕೊಳ್ತಾಳೆ.
ಎಷ್ಟೊತ್ತು ಮಲಗಿದ್ರೂ ನಿದ್ದೆ ಬರ್ತಾನೇ ಇಲ್ಲ ಎಂದಾಗ ನಿಮ್ಮ ಉಸಿರಾಟದ ಮೇಲೆ ಗಮಹರಿಸಿ. ಆಗ ತಂತಾನೇ ನಿದ್ದೆ ಬರುತ್ತದೆ.
ಯಾವುದಾದ್ರೂ ಆತಂಕ, ಭಯ, ಚಿಂತೆಯಿಂದ್ಲೂ ಕೆಲವೊಮ್ಮೆ ನಿದ್ದೆ ನಮ್ಮ ಹತ್ತಿರ ಸುಳಿಯೋದಿಲ್ಲ. ಅಂತಹ ಸಂದರ್ಭದಲ್ಲಿ ನಿಮ್ಮ ಮನಸ್ಸಿಗೆ ಆಹ್ಲಾದ ನೀಡುವಂತಹ ಯಾವುದಾದರೂ ಕೆಲಸ ಮಾಡಿ.