alex Certify ದುಬೈನ ಬುರ್ಜ್​ ಖಲೀಫಾ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಬೈನ ಬುರ್ಜ್​ ಖಲೀಫಾ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ, ಅತಿದೊಡ್ಡ ಮಾನವ ನಿರ್ಮಿತ ದ್ವೀಪ, ಅತಿದೊಡ್ಡ ಮಾಲ್ ಮತ್ತು ಅತ್ಯಂತ ಐಷಾರಾಮಿ ಹೋಟೆಲ್ ಎನಿಸಿಕೊಂಡಿರುವ ಬುರ್ಜ್​ ಖಲೀಫಾ ಅಚ್ಚರಿಗಳ ಆಗರ. ನೀವು ಈ ಕಟ್ಟಡಕ್ಕೆ ಭೇಟಿ ನೀಡದ ಹೊರತು ದುಬೈ ಪ್ರವಾಸವು ಪೂರ್ಣಗೊಳ್ಳುವುದಿಲ್ಲ. ಪ್ರವಾಸಿಗರು ನಗರದ ವಿಹಂಗಮ ನೋಟಗಳನ್ನು ಆನಂದಿಸಲು 124 ನೇ ಮಹಡಿಯಲ್ಲಿರುವ ವೀಕ್ಷಣಾ ಡೆಕ್‌ಗೆ ಭೇಟಿ ನೀಡಬಹುದು.

ಬುರ್ಜ್ ಖಲೀಫಾ ಅತಿ ಎತ್ತರದ ಕಟ್ಟಡ ಎಂಬ ವಿಶ್ವ ದಾಖಲೆಯನ್ನು ಹೊಂದಿದೆ. ಇದು ಹಲವಾರು ದಾಖಲೆಗಳನ್ನು ಹೊಂದಿದೆ. ಬುರ್ಜ್ ಖಲೀಫಾದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

ಬುರ್ಜ್ ಖಲೀಫಾ ಒಟ್ಟು 829.8 ಮೀಟರ್ (2,722 ಅಡಿ) ಎತ್ತರದಲ್ಲಿದೆ. ಇದು ಐಫೆಲ್ ಟವರ್‌ನ ಮೂರು ಪಟ್ಟು ಎತ್ತರ ಮತ್ತು ಎಂಪೈರ್ ಸ್ಟೇಟ್ ಕಟ್ಟಡದ ಎರಡು ಪಟ್ಟು ಎತ್ತರವಾಗಿದೆ. ಎಲ್ಲವುಗಳಿಗಿಂತ ಆಕರ್ಷಕವಾದ ಸಂಗತಿಯೆಂದರೆ ಈ ಕಟ್ಟಡದ ತುದಿಯನ್ನು 95 ಕಿಲೋಮೀಟರ್ ದೂರದಿಂದ ನೋಡಬಹುದಾಗಿದೆ. ಈ ಕಟ್ಟಡಕ್ಕೆ ಬಳಸಲಾದ ಕಾಂಕ್ರೀಟ್ 1 ಲಕ್ಷ ಆನೆಗಳಷ್ಟೇ ತೂಗುತ್ತದೆ. ಬುರ್ಜ್ ಖಲೀಫಾದ ನಿರ್ಮಾಣದಲ್ಲಿ ಬಳಸಲಾದ ಅಲ್ಯೂಮಿನಿಯಂನ ಒಟ್ಟು ತೂಕವು ಐದು A380 ವಿಮಾನಗಳಿಗೆ ಸಮನಾಗಿರುತ್ತದೆ.

ಇದರಲ್ಲಿ ಪ್ರತಿ ವರ್ಷ, 15 ಮಿಲಿಯನ್ ಗ್ಯಾಲನ್‌ಗಳಷ್ಟು ನೀರನ್ನು ಸಮರ್ಥವಾಗಿ ಸಂಗ್ರಹಿಸಲಾಗುತ್ತದೆ. ಭೂದೃಶ್ಯ ಮತ್ತು ಸಸ್ಯಗಳಿಗೆ ನೀರುಣಿಸಲು, ಕೂಲಿಂಗ್ ವ್ಯವಸ್ಥೆಗೆ ಮತ್ತು ದುಬೈ ಕಾರಂಜಿಯನ್ನು ಪೂರೈಸಲು ಇಲ್ಲಿನ ನೀರನ್ನು ಬಳಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...