ಇಂಟರ್ನೆಟ್ ಬಳಕೆ ಬಂದ ಬಳಿಕ ವಂಚನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮಾಹಿತಿ ತಂತ್ರಜ್ಞಾನ ಎಷ್ಟು ಅನುಕೂಲಕರವೋ ಅಷ್ಟೇ ವೇಗದಲ್ಲಿ ದುಷ್ಕರ್ಮಿಗಳು ಇದನ್ನೇ ತಮ್ಮ ವಂಚನೆಗೆ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಹಲವು ಪ್ರಕರಣಗಳು ಈಗಾಗಲೇ ವರದಿಯಾಗಿವೆ. ಇದೀಗ ಅದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ.
ಒಂದೊಮ್ಮೆ ನಿಮಗೂ ಇಂತಹ ಸಂದೇಶ ಬಂದಿದ್ದರೆ ಈ ಕುರಿತು ಎಚ್ಚರದಿಂದ ಇರಿ. ಈ ಕುರಿತ ಮಾಹಿತಿ ಇಲ್ಲಿದೆ.
IndianOil ನಿಂದ ಎಂದು ಹೇಳಿಕೊಳ್ಳುವ ನಕಲಿ ಸ್ಪರ್ಧೆಗಳ ಬಗ್ಗೆ ಎಚ್ಚರದಿಂದಿರಿ. ಎಲ್ಲಾ ಅಧಿಕೃತ ಸ್ಪರ್ಧೆಗಳು ಅಥವಾ ಪ್ರಕಟಣೆಗಳನ್ನು ಅಧಿಕೃತ ವೆಬ್‌ಸೈಟ್ ಮತ್ತು ಪರಿಶೀಲಿಸಿದ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮಾತ್ರ ಪೋಸ್ಟ್ ಮಾಡಲಾಗುತ್ತದೆ.
ಪರಿಶೀಲಿಸದ ಮೂಲಗಳಿಗೆ ವೈಯಕ್ತಿಕ ಮಾಹಿತಿಯನ್ನು ನೀಡಬೇಡಿ. ಜಾಗರೂಕರಾಗಿರಿ, ಸುರಕ್ಷಿತವಾಗಿರಿ.