alex Certify ALERT : ನಿಮಗೂ ಯೋಗಾ ಕ್ಲಾಸ್ ಲಿಂಕ್ ಬಂದಿದ್ಯಾ..? : ಯಾಮಾರಿ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ನಿಮಗೂ ಯೋಗಾ ಕ್ಲಾಸ್ ಲಿಂಕ್ ಬಂದಿದ್ಯಾ..? : ಯಾಮಾರಿ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ..!

ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ಪ್ರಪಂಚದಾದ್ಯಂತದ ಇತ್ತೀಚಿನ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಆನ್ ಲೈನ್ ನಲ್ಲಿ ತಮ್ಮ ಸ್ನೇಹಿತರೊಂದಿಗೆ ಸಂವಹನ ನಡೆಸಲು ಅಂತರ್ಜಾಲವನ್ನು, ವಿಶೇಷವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ.

ಒಂದೆಡೆ, ಸಾಮಾಜಿಕ ಮಾಧ್ಯಮವು ಬಳಕೆದಾರರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ, ಆದರೆ ಅದೇ ಸಮಯದಲ್ಲಿ, ಸೈಬರ್ ಅಪರಾಧಗಳಿಗಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಲು ವಂಚಕರಿಗೆ ಇದು ಪ್ರಮುಖ ಸಾಧನವಾಗಿದೆ. ಅಂತಹ ಒಂದು ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ವಾಟ್ಸಾಪ್ ಆಗಿದೆ. ವರದಿಯ ಪ್ರಕಾರ, ಸೈಬರ್ ಅಪರಾಧಿಗಳು ಬಳಕೆದಾರರ ಫೇಸ್ಬುಕ್ ಪ್ರೊಫೈಲ್ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ ಮತ್ತು ಮೆಸೆಂಜರ್ ಮೂಲಕ ತಮ್ಮ ಸ್ನೇಹಿತರ ಪಟ್ಟಿಯಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯ ಸಂದರ್ಭದಲ್ಲಿ ಕೋಲ್ಕತ್ತಾ ನಗರದಲ್ಲಿ ಇಂತಹ ಹಲವಾರು ಪ್ರಕರಣ ವರದಿಯಾಗಿದೆ. ಈ ಕುರಿತು ಹಲವು ಪ್ರಕರಣ ದಾಖಲಾಗುತ್ತಿದ್ದಂತೆ ಕೋಲ್ಕತಾ ಪೊಲೀಸರು ಅಲರ್ಟ್ ಸಂದೇಶ ರವಾನಿಸಿದ್ದಾರೆ.
ಮೊದಲು ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಬಳಕೆದಾರರ ಮೆಸೇಂಜರ್ ಮೂಲಕ ಆಪ್ತರಿಗೆ, ಗೆಳೆಯರಿಗೆ ಯೋಗಾ ಕ್ಲಾಸ್ ಆರಂಭ ಮಾಡುತ್ತಿರುವುದಾಗಿ ಲಿಂಕ್ ಕಳುಹಿಸುತ್ತಾರೆ. ಈ ಲಿಂಕ್ ಓಪನ್ ಮಾಡಿದರೆ ಸಾಕು ಒಟಿಪಿ ಕೇಳುತ್ತದೆ. ಈ ಒಟಿಪೆಯನ್ನು ಹಂಚಿಕೊಂಡರೆ ಸಾಕು ನಿಮ್ಮ ವ್ಯಾಟ್ಸ್ಆ್ಯಪ್ ನಂಬರ್ ಕೂಡ ಹ್ಯಾಕ್ ಆಗಲಿದೆ. ಬಳಿಕ ಹ್ಯಾಕರ್ಸ್ ನಿಮ್ಮ ವ್ಯಾಟ್ಸ್ಆ್ಯಪ್ ನಂಬರ್ ಬಳಸಿ ಹಣ ಎಗರಿಸುತ್ತಾರೆ. ಯಾವುದೇ ಆಫರ್, ರಿಜಿಸ್ಟ್ರೇಶನ್, ಸೇರಿದಂತೆ ಅನಧಿಕೃತ ಲಿಂಕ್ಗಳನ್ನು ಓಪನ್ ಮಾಡಬೇಡಿ ಎಂದು ಕೋಲ್ಕತ್ತಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...