![](https://kannadadunia.com/wp-content/uploads/2021/01/gas_trouble_pic.jpg)
ಸಭೆ ಸಮಾರಂಭಗಳು ಒಂದೊಂದಾಗಿ ಆರಂಭವಾದಂತೆ ಅದರಲ್ಲೂ ಮದುವೆ ಮುಂಜಿಯಂಥ ಕಾರ್ಯಕ್ರಮ ಎಂದರೆ ಕೇಳಬೇಕಾ, ಹೊಟ್ಟೆ ತುಂಬಾ ಊಟ, ತಿಂಡಿ, ಬಗೆಬಗೆ ವೈವಿಧ್ಯಗಳು ಇರುತ್ತವೆ. ಎಲ್ಲವನ್ನೂ ತಿಂದು ಹೊಟ್ಟೆ ಹಾಳಾಗಿದೆಯೇ, ಹಾಗಿದ್ದರೆ ಇಲ್ಲಿದೆ ಮನೆಮದ್ದು.
ಆಸಿಡಿಟಿ, ಅಜೀರ್ಣ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿ ಬಂದು ಹೊಟ್ಟೆನೋವು ಕಾಣಿಸಿಕೊಂಡಿದೆಯೇ, ಹಸಿವು ಇಲ್ಲವಾಗಿದೆಯೇ, ಉರಿ ತೇಗು ಬರುತ್ತಿದೆಯೇ. ಎಲ್ಲಾ ಸಮಸ್ಯೆಗೂ ಜೀರಾ ನೀರು ಕುಡಿಯಬಹುದು.
ಎರಡು ಲೋಟ ನೀರಿಗೆ ಎರಡರಿಂದ ಮೂರು ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಹತ್ತು ನಿಮಿಷ ಕುದಿದ ಬಳಿಕ ಚಿಟಿಕೆ ಮೆಣಸಿನ ಪುಡಿ, ಲಿಂಬೆರಸ, ಒಂದೆರಡು ಎಲೆ ಪುದೀನಾ ಹಾಕಿ ಮತ್ತೆರಡು ಕುದಿ ಬರಿಸಿ. ಬಳಿಕ ಮುಚ್ಚಿಡಿ.
ಕುಡಿಯಲು ಬೇಕಿರುವಷ್ಟು ಬಿಸಿಯಾಗುವ ತನಕ ಆರಲು ಬಿಡಿ. ಚಿಟಿಕೆ ಸೋಡಾ ಬೆರೆಸಿ. ಸಿಹಿ ಬೇಕಿದ್ದರೆ ಸಕ್ಕರೆ ಬದಲು ಜೇನುತುಪ್ಪ ಬೆರೆಸಿ ಕುಡಿಯಿರಿ. ಐಸ್ ಇಷ್ಟಪಡುವವರಾದರೆ ಸಂಪೂರ್ಣ ತಣ್ಣಗಾದ ಬಳಿಕ ಐಸ್ ಕ್ಯೂಬ್ ಹಾಕಿ ಕುಡಿಯಿರಿ.