ಭಾರತದಲ್ಲಿ ಚಹಾ ಪ್ರಿಯರಿಗೇನೂ ಕೊರತೆಯಿಲ್ಲ. ಕೆಲವರು ಮಾಮೂಲಿ ಹಾಲು, ಸಕ್ಕರೆಯ ಚಹಾ ಕುಡಿಯುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ಇರುವವರು ಗ್ರೀನ್ ಟೀ ಅಭ್ಯಾಸ ಮಾಡಿಕೊಂಡಿದ್ದಾರೆ. ನೀವೂ ಕೂಡ ಇನ್ನೂ ಹೆಲ್ದಿ ಆಪ್ಷನ್ ಬೇಕೆಂದರೆ ವೈಟ್ ಟೀಯನ್ನು ಟ್ರೈ ಮಾಡಬಹುದು.
ಬಿಳಿ ಚಹಾವು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ವೈಟ್ ಟೀಯಲ್ಲಿರುವ ಖನಿಜಾಂಶಗಳು ಹಲ್ಲುಗಳನ್ನು ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತವೆ. ಬಿಳಿ ಚಹಾವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಫ್ಲೋರೈಡ್, ಕ್ಯಾಟೆಚಿನ್ ಮತ್ತು ಟ್ಯಾನಿನ್‌ನಂತಹ ಖನಿಜಗಳು ಇದರಲ್ಲಿವೆ.
ಫ್ಲೋರೈಡ್ ಹಲ್ಲುಗಳಲ್ಲಿ ಕುಳಿಗಳಾಗದಂತೆ ತಡೆಯುತ್ತದೆ ಮತ್ತು ಬ್ಯಾಕ್ಟೀರಿಯಾದ ಆಮ್ಲ ದಾಳಿಯ ವಿರುದ್ಧ ಹೋರಾಡಲು ಹಲ್ಲುಗಳನ್ನು ಬಲಪಡಿಸುತ್ತದೆ. ಹಲ್ಲು ಹುಳುಕಾಗದಂತೆಯೂ ಈ ಖನಿಜಗಳು ರಕ್ಷಿಸುತ್ತವೆ. ಅಷ್ಟೇ ಅಲ್ಲ ವೈಟ್ ಟೀ ಕುಡಿಯುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.
ಇದರಲ್ಲಿ ಸಸ್ಯಾಧಾರಿತ ಅಣುಗಳಿವೆ, ಇದು ನಿಮ್ಮ ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಅಣುಗಳು ಒಂದು ರೀತಿಯ ಪಾಲಿಫಿನಾಲ್, ಇವುಗಳನ್ನು ಕ್ಯಾಟೆಚಿನ್ ಎಂದು ಕರೆಯಲಾಗುತ್ತದೆ. ಇವುಗಳ ಸೇವನೆ ನಿಮ್ಮ ಹೃದಯಕ್ಕೆ ಒಳ್ಳೆಯದು. ಪಾಲಿಫಿನಾಲ್ಗಳು ನಿಮ್ಮ ರಕ್ತನಾಳಗಳಿಗೆ ವಿಶ್ರಾಂತಿ ನೀಡುತ್ತವೆ ಮತ್ತು ಅಡಚಣೆಯನ್ನು ಕಡಿಮೆ ಮಾಡುತ್ತವೆ.
ಇದರಿಂದಾಗಿ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ತಜ್ಞರ ಪ್ರಕಾರ ಪ್ರತಿದಿನ ವೈಟ್ ಟೀ ಸೇವಿಸುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಶೇ.21 ರಷ್ಟು ಕಡಿಮೆಯಾಗುತ್ತದೆ.